# CT Ravi: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ಹೀನಾಯ ಸೋಲು

- Link: https://hosakannada.com/politics/defeat-for-ct-ravi-in-chikamagaluru-constituency/
- Published: 2023-05-13T16:13:14+00:00
- Author: ಕಾವ್ಯ ವಾಣಿ

CT Ravi: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ (CT
Ravi) ಅವರು ಹೀನಾಯವಾಗಿ ಸೋಲು ಕಂಡಿದ್ದಾರೆ. ಮತದಾರರು ಈ ಬಾರಿ ಸಿಟಿ ರವಿ ಅವರಿಗೆ ಒಲವು ತೋರಿಸಲಿಲ್ಲವೆಂದು
ಈ ಸೋಲಿನ ಮೂಲಕ ಸ್ಪಷ್ಟವಾಗಿ ಅರಿವಾಗಿದೆ.

Sponsored

ಈ ಮೊದಲು 2018ರಲ್ಲಿ ಸಿಟಿ ರವಿ 70,863 ಮತ ಗಳಿಸಿದ್ದರು. ಬರೋಬ್ಬರಿ 26,314 ಮತಗಳ ಮುನ್ನಡೆಯಿಂದ
ಸಿಟಿ ರವಿ ಗೆದ್ದಿದ್ದರು. ಇನ್ನು ಸಿ.ಟಿ. ರವಿ 2004ರಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದ
ಅವರಿಗೆ ಈ ಬಾರಿ ಗೆಲುವು ಗಿಟ್ಟಿಸಲಿಲ್ಲ. ಇದೀಗ ತಮ್ಮ ಆಪ್ತರಾಗಿದ್ದ ಕಾಂಗ್ರೆಸ್‌ನ ಹೆಚ್‌ಡಿ ತಮ್ಮಯ್ಯ
ಅವರು ರವಿ ವಿರುದ್ಧ ಭರ್ಜರಿ ಗೆಲುವು ಕಂಡಿದ್ದಾರೆ.

Advertisement

Advertisement

Advertisement
