# C.S.Puttaraju: ಒಂದೇ ಅವಧಿಯಲ್ಲಿ ಒಬ್ಬ 2 ಅಸೆಂಬ್ಲಿ, 2 ಎಂಪಿ ಚುನಾವಣೆ ಎದುರಿಸಿದ ಗಂಡು ಇದ್ರೆ ಅದು ನಾನೊಬ್ಬನೇ: ಮೇಲುಕೋಟೆ ಪುಟ್ಟರಾಜು !

- Link: https://hosakannada.com/politics/c-s-puttaraju-said-that-2-assembly-2-mp-elections-were-faced-in-one-period/
- Published: 2023-05-11T16:01:04+00:00
- Author: ಹೊಸಕನ್ನಡ ನ್ಯೂಸ್

C.S.Puttaraju: ದೇಶದಲ್ಲಿ ಒಂದೇ ಅವಧಿಯಲ್ಲಿ ಒಬ್ಬ ಎರಡು ಅಸೆಂಬ್ಲಿ, ಎರಡು ಎಂಪಿ ಚುನಾವಣೆ ಮಾಡಿರೋದು
ಯಾರು ಗೊತ್ತೇ ? ಅಂದರೆ 5 ವರ್ಷಗಳ ಅವಧಿಯಲ್ಲಿ ಒಬ್ಬನೇ ಎರಡು ಅಸೆಂಬ್ಲಿ, ಎರಡು ಎಂಪಿ ಚುನಾವಣೆ ಮಾಡಿರೋದು
ಇದ್ದರೆ ಅದು ನಾನು ಒಬ್ಬನೇ ಎಂದು ಕರ್ನಾಟಕದ ರಾಜಕಾರಣಿಯೊಬ್ಬರು ಹೇಳಿಕೊಂಡಿದ್ದಾರೆ.

Sponsored

ಮಾಜಿ ಸಚಿವ, ಮೇಲುಕೋಟೆ ಜೆಡಿಎಸ್ (JDS) ಅಭ್ಯರ್ಥಿ [ಸಿ.ಎಸ್ ಪುಟ್ಟರಾಜು](https://en.m.wikipedia.org/wiki/C._S._Puttaraju)(
C.S.Puttaraju) ಅವರು ನಾನು ಒಂದೇ ಟರ್ಮಿನಲ್ಲಿ ಎರಡು ಬಾರಿ ಎಂಪಿತ್ರಿ ಚುನಾವಣೆಯನ್ನು ಎದುರಿಸಿದವನು
ಎಂದಿದ್ದಾರೆ.

Advertisement

Advertisement

ಮಂಡ್ಯ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ನಾನು ಚುನಾವಣೆ ಮಾಡೋದರಲ್ಲಿ ಪಿಹೆಚ್‍ಡಿ
ಮಾಡಿಬಿಟ್ಟಿದ್ದೇನೆ. ರಾಜಕಾರಣದಲ್ಲಿ 40 ವರ್ಷ ಸರ್ವಿಸ್ ಆಗಿದೆ. ನನಗೆ ಪಿಹೆಚ್‍ಡಿ’ ಆಗಿದೆ ಎಂದಿದ್ದಾರೆ
ಪುಟ್ಟರಾಜು.

ಮುಂದುವರಿಸಿ ಮಾತನಾಡಿದ ಪುಟ್ಟರಾಜುರವರು, ” ರೈತ ಸಂಘಕ್ಕೆ ಸೋಲಿನ ಹತಾಶೆ ಈಗ ಎದುರಾಗಿದೆ. ನಾನು 
ಸೋಲು-ಗೆಲುವು ನೋಡಿರುವವನು. ನನಗೆ ಭಯನೇ ಇಲ್ಲ. ಈ ಚುನಾವಣೆಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸ.
ನನ್ನನ್ನು ಅತ್ಯಂತ ಬಹುಮತದಲ್ಲಿ ಗೆಲುವು ತಂದುಕೊಡುತ್ತೆ. ಈಗಾಗಲೇ ಗೆಲುವು ತೀರ್ಮಾನವಾಗಿ ಬೂತ್ ನಲ್ಲಿ.
ಭದ್ರವಾಗಿದೆ ‘ ಎಂದು ಅವರು ಹೇಳಿದ್ದಾರೆ.

‘ ಈ ಪುಟ್ಟರಾಜುಗೆ ಸೋಲಿನ ಹತಾಶೆನೇ ಇಲ್ಲ. ಒಂದು ಅವಧಿಯಲ್ಲಿ ಎರಡು ಸಲ ಸೋತಿದ್ದೀನಿ, ಎರಡು ಸಲ ಗೆದ್ದಿದ್ದೀನಿ.
ಈ ದೇಶದಲ್ಲಿ ಯಾವನಾದರೂ ಒಬ್ಬ ಎರಡು ಅಸೆಂಬ್ಲಿ ಚುನಾವಣೆ, ಎರಡು ಎಂಪಿ ಚುನಾವಣೆ ಮಾಡಿರೋ ಗಂಡು ಯಾರಾದ್ರು
ಇದ್ರೆ, ಅದು ಪುಟ್ಟರಾಜು ಒಬ್ಬನೇ ! ಅದಕ್ಕೇ ಈಗ ಚುನಾವಣಾ ಭಯನೇ ಇಲ್ಲ. ನೂರಕ್ಕೆ ನೂರರಷ್ಟು ಈ ಬಾರಿ
ಗೆಲ್ತೇನೆ. ಕನಿಷ್ಟ 25 ಸಾವಿರ ಲೀಡ್ ಇಟ್ಕೊಂಡು ಗೆಲ್ತೇನೆ. ನನ್ನ ಲೀಡ್ ಇನ್ನೂ ಬಹಳ ಮುಂದೆ ಹೋಗುತ್ತೆ‘
ಎಂದಿದ್ದಾರೆ ಮೇಲುಕೋಟೆ ಹಾಲಿ ಶಾಸಕ ಮತ್ತು ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು.

 

ಇದನ್ನು ಓದಿ:[ Karnataka Government Upcoming Jobs 2023: ಸರಕಾರಿ ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ!​ ಮುಂಬರುವ ದಿನಗಳಲ್ಲಿ ಪ್ರಕಟವಾಗಲಿರುವ ಕರ್ನಾಟಕ ಸರ್ಕಾರಿ ಹುದ್ದೆಗಳ ಲಿಸ್ಟ್‌ ಇಲ್ಲಿದೆ! ](https://hosakannada.com/2023/05/11/karnataka-government-upcoming-jobs-2023/)

Advertisement
