# ಮದುವೆ ಬೇಡ ಎಂದ ಯುವತಿ: ವರನ ಕುಟುಂಬದಿಂದ ದೂರು ದಾಖಲು

- Link: https://hosakannada.com/news/young-woman-says-she-doesnt-want-to-get-married-complaint-filed-against-the-grooms-family/
- Published: 2026-10-12T11:01:17+00:00
- Author: ಹೊಸಕನ್ನಡ ನ್ಯೂಸ್

ಕಾಸರಗೋಡು: ನಿಶ್ಚಿತಾರ್ಥ ನಡೆದು, ನಂತರ ಮದುವೆಯಿಂದ ಹಿಂದೆ ಸರಿದಿದ್ದು, ಆದರೆ ನಿಶ್ಚಿತಾರ್ಥ ಸಂದರ್ಭದಲ್ಲಿ
ವರನ ಕಡೆಯವರು ನೀಡಿದ ಚಿನ್ನಾಭರಣ, ನಗದು, ಉಡುಗೊರೆ ಹಿಂದಿರುಗಿಸದೆ ವಂಚನೆ ಮಾಡಿದ ಆರೋಪದಲ್ಲಿ ವಧುವಿನ
ಕಡೆಯವರ ಮೇಲೆ ದೂರು ದಾಖಲಾಗಿದೆ.

Sponsored

ಪಡನ್ನಕ್ಕಾಡ್‌ ಸಮೀಪದ ಯುವಕನ ವಿವಾಹವನ್ನು ಉದುಮ ಸಮೀಪದ ಯುವತಿ ಜೊತೆ ಮಾಡುವ ಕುರಿತು ಈ ವರ್ಷದ ಎಪ್ರಿಲ್‌ನಲ್ಲಿ
ನಿಶ್ಚಯ ಮಾಡಲಾಗಿತ್ತು. ಬೇಕಲ್‌ ರೆಸಾರ್ಟ್‌ ಒಂದರಲ್ಲಿ ನಿಶ್ಚಿತಾರ್ಥ ನಡೆದಿದ್ದು, ಈ ಸಂದರ್ಭ ವಧುವಿಗೆ
ಐಫೋನ್‌, ಚಿನ್ನಾಭರಣ, ವಿವಿಧ ಉಡುಗೊರೆ ನಗದು ಸೇರಿ ಸುಮಾರು 7.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು
ವರನ ಕುಟುಂಬದವರು 
 ನೀಡಿದ್ದಾರೆ.

Advertisement

Advertisement

ನಂತರ ಯುವತಿ ತನ್ನ ತಾಯಿ, ತಾಯಿಯ ಸಹೋದರ ಸೇರಿ ಮದುವೆ ರದ್ದುಗೊಳಿಸಲು ಸಂಚು ಮಾಡಿದ್ದಾರೆ. ನಿಶ್ಚಿತಾರ್ಥ
ಸಂದರ್ಭದಲ್ಲಿ ಐಫೋನ್‌ ಇತರ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ಅವರು ನಿರಾಕರಿಸಿದ್ದಾರೆ ಎಂದು
ದೂರಿನಲ್ಲಿ ಆರೋಪ ಮಾಡಲಾಗಿದೆ.

ಹೊಸದುರ್ಗ ಪೊಲೀಸರು ವರನ ಕಡೆಯವರು ನೀಡಿದ ದೂರಿನ ಅನುಸಾರ ಯುವತಿ, ಆಕೆಯ ತಾಯಿ ಹಾಗೂ ಮಾವನ ವಿರುದ್ಧ
ಪ್ರಕರಣ ದಾಖಲು ಮಾಡಿದ್ದಾರೆ.

Advertisement
