# ಸಂತ ಸೆಬಾಸ್ಟಿಯನ್‌ ಚರ್ಚ್‌ ಗರ್ಡಾಡಿಯಲ್ಲಿ ಮಹಿಳಾ ದಿನಾಚರಣೆ ಮತ್ತು ದಶಮಾನೋತ್ಸವ ಕಾರ್ಯಕ್ರಮ

- Link: https://hosakannada.com/news/womens-day-and-10th-anniversary-celebration-at-st-sebastians-church-gardadi/
- Published: 2026-03-21T11:22:44+00:00
- Author: ಹೊಸಕನ್ನಡ ನ್ಯೂಸ್

ಗರ್ಡಾಡಿ: ಸಂತ ಸೆಬಾಸ್ಟಿಯನ್ ಚರ್ಚಿನಲ್ಲಿ ಸ್ತ್ರೀ ಸಂಘಟನೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನ
ಮತ್ತು ಘಟಕದ ದಶಮಾನೋತ್ಸವವನ್ನು ಬಹಳ ವಿಜೃಂಭಣೆಯಿಂದ ಮಾ. 15ರಂದು ಆಚರಿಸಲಾಯಿತು.

Sponsored

ಬೆಳಗಿನ ದಿವ್ಯ ಬಲಿಪೂಜೆಯ ನಂತರ ಸಭಾ ಕಾರ್ಯಕ್ರಮದಲ್ಲಿ ಗರ್ಡಾಡಿ ಚರ್ಚಿನ ಧರ್ಮಗುರುಗಳು ಫಾ.ಸುದೀಪ್
ಸಂತಾನ್ ಗೊನ್ಸಲ್ವಿಸ್, ಸಂಘಟನೆಯ ಅಧ್ಯಕ್ಷೆ ಮೇಬಲ್‌ ಕ್ರಸ್ತಾ, ಬದ್ಯಾ‌ರ್ ಚರ್ಚಿನ ಧರ್ಮ ಗುರುಗಳು
ಫಾ. ರೊಶನ್ ಕ್ರಾಸ್ತ, ಬೆಳ್ತಂಗಡಿ ವಲಯ ಸ್ತ್ರೀ ಮಂಡಳಿ ಅಧ್ಯಕ್ಷ ಗ್ರೇಸಿ ಲೊಬೊ, ಗರ್ಡಾಡಿ ಚರ್ಚಿನ
ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸ್ಟೀವನ್ ಮೊನಿಸ್, ಚರ್ಚ್ ಪಾಲನ ಸಮಿತಿ ಕಾರ್ಯದರ್ಶಿ ಪ್ಲಾವಿಯಾ ಮೊನಿಸ್,
ಘಟಕದ ಕಾರ್ಯದರ್ಶಿ ಜಾನೆಟ್ ಮೊನಿಸ್ ಉಪಸ್ಥಿತರಿದ್ದರು.
 ಕುಟುಂಬ ಸಂರಕ್ಷಣೆ ಸ್ತ್ರೀ ಯರಿಗೆ ಸಿಗಬೇಕಾದ
ಸ್ಥಾನಮಾನಗಳು ಮಕ್ಕಳಿಗೆ ನೀಡಬೇಕಾದ ಸಂಸ್ಕಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಗರ್ಡಾಡಿ ಚರ್ಚಿನ
ಧರ್ಮಗುರುಗಳು ಗರ್ಡಾಡಿ ಸ್ತ್ರೀ ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬದ್ಯಾರ್ ಚರ್ಚ್ ಧರ್ಮಗುರುಗಳು ಕುಟುಂಬ ಸಂರಕ್ಷಣೆ, ಸ್ತ್ರೀಯರಿಗೆ ಸಿಗಬೇಕಾದ ಸ್ಥಾನ ಮಾನಗಳು, ಮಕ್ಕಳಿಗೆ
ನೀಡಬೇಕಾದ ಸಂಸ್ಕಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಮಹಿಳೆಯರಿಗೆ ಹೂಗಚ್ಚ ಸ್ಪರ್ಧೆಯನ್ನು ಏರ್ಪಡಿಸಿದ್ದು
ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

Advertisement

Advertisement

ಅಲ್ಲದೆ ಎಲ್ಲಾ ಮಹಿಳೆಯರಿಗೂ ವಿವಿಧ ಸ್ಪರ್ದೆಗಳನ್ನು ಹಮ್ಮಿಕೊಂಡು ಬಹುಮಾನವನ್ನು ವಿತರಿಸಲಾಯಿತು.
ದಶಮಾನೋತ್ಸವದ ಈ ಕಾರ್ಯಕ್ರಮದಲ್ಲಿ ಸಂಘಟನೆಯಲ್ಲಿ ನಿಸ್ವಾರ್ಥ ಸೇವೆಸಲ್ಲಿಸಿದ ಮೇರಿ ಫೆರ್ನಾಂಡಿಸ್‌,
ಮೇಬಲ್ ಕ್ರಾಸ್ತ, ಸನ್ನಾನ ಪ್ರೆಸಿಲ್ಲ ವೇಗಸ್, ಪ್ರಿಯಾ ಮಾಡ್ತಾ ಹಾಗೂ ಜಾನೆಟ್ ಮೊನಿಸ್ ರವರನ್ನು 
ಸನ್ಮಾಸಿಸಲಾಯಿತು

ಕಾರ್ಯಕ್ರಮಕ್ಕೆ ಉದಾರ ದಾನ ನೀಡಿದ ದಾನಿಗಳನ್ನು ಗುರುತಿಸಲಾಯಿತು. ಸಭಾ ಕಾರ್ಯಕ್ರಮದ ನಂತರ, ಸಾಂಸ್ಕೃಂತಿಕ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ವೇರೋನಿಕ ಮೋನಿಸ್ ಸ್ವಾಗತಿಸಿದರು. ಶಿಕ್ಷಕಿಯಾದ ಲಿವೀನಾ
ಫೆನಾಂಡಿಸ್, ನಿರೂಪಿಸಿ, ಸಬಿತಾ ಮೊನಿಸ್ ಧನ್ಯವಾಗೈದರು. ಮಧ್ಯಾಹ್ನದ ಸಂಭ್ರಮದ ಭೋಜನದೊಂದಿಗೆ, ಕಾರ್ಯಕ್ರಮವು
ಮುಕ್ತಾಯಗೊಂಡಿತು.

Advertisement
