# Women Death: ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ಮೃತ್ಯು ; ಕಾರಣ ಕೇಳಿದ್ರೆ ನೀವೂ ಮರುಗುತ್ತೀರಾ!

- Link: https://hosakannada.com/news/women-death-newlyweds-died-within-a-few-days-of-their-marriage/
- Published: 2023-07-11T10:12:48+00:00
- Author: ವಿದ್ಯಾ ಗೌಡ

Women Death: ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ 
ಘಟನೆ ಕೇರಳದ ಪಲಕ್ಕಾಡ್​​ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು (Women Death) ಪುಥುಕೋಡ್​ನ ಕಣ್ಣನ್ನೂರ್
ಮೂಲದ ಅನಿಶಾ(20) ಎಂದು ಗುರುತಿಸಲಾಗಿದೆ.

Sponsored

ಅನಿಶಾ ಕೊಯಮತ್ತೂರು ಮೂಲದ ಶಕಿರ್​ (32) ಎಂಬಾತನನ್ನು ಜೂನ್​ 4ರಂದು ಮದುವೆಯಾಗಿದ್ದರು. ನಿನ್ನೆ (
ಜು.10) ಬೆಳಗ್ಗೆ​ಸಂಬಂಧಿಕರ ಮನೆಯಲ್ಲಿ ಹಬ್ಬ ಮುಗಿಸಿಕೊಂಡು ಅನಿಶಾ ಹಾಗೂ ಪತಿ ಮನೆಗೆ ವಾಪಾಸ್ಸು 
ಹಿಂತಿರುಗುವಾಗ ಪಲಕ್ಕಾಡ್​ನ ಪುದುಸ್ಸೆರಿಯ ಕುರುಡಿಕಾಡ್​ ಎಂಬ ಪ್ರದೇಶದಲ್ಲಿ ದಂಪತಿ ಪ್ರಯಾಣಿಸುತ್ತಿದ್ದ
ಬೈಕ್ ಹಾಗೂ ಲಾರಿ​ ನಡುವೆ ಡಿಕ್ಕಿಯಾಗಿದ್ದು, ಘಟನೆ ಪರಿಣಾಮ ಅನಿಶಾ ಸಾವನ್ನಪ್ಪಿದ್ದು, ಶಕಿರ್​ (
32) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Advertisement

ಕಂಟೈನರ್​ ಓವರ್​ಟೇಕ್​ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯನ್ನು
ಕಳೆದುಕೊಂಡ ಶಕೀರ್​ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯವರು ಕಂಬನಿ ಮಿಡಿದಿದ್ದಾರೆ. ಸದ್ಯ ಘಟನೆ 
ಸಂಬಂದ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

 

ಇದನ್ನು ಓದಿ: [Jain Muni murder: ಬೆಳಗಾವಿ ಜೈನ ಮುನಿ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ !! ಕೊಲೆಯಲ್ಲಿ ಮುಸ್ಲಿಂ ವ್ಯಕ್ತಿ ಕೈವಾಡ ?! ಈ ಕಾರಣಕ್ಕೆ ನಡೆಯಿತಾ ಕೊಲೆ ? ](https://hosakannada.com/2023/07/11/latest-news-muruder-news-death-news-muslim-man-was-involved-in-the-murder-of-jain-muni/)

Advertisement
