# ಹೊರಬಿದ್ದಿದೆ ಒಂದು ಸ್ಫೋಟಕ ಮಾಹಿತಿ | ವಾಟ್ಸಪ್ ನ ಸಂದೇಶಗಳು ಗೌಪ್ಯವಾಗಿಲ್ಲ ಎಂದು ಹೇಳಿರುವ ವರದಿ ಬಹಿರಂಗ !!

- Link: https://hosakannada.com/news/whatsp-msg-not-secured/
- Published: 2021-09-08T13:51:55+00:00
- Author: ಹೊಸಕನ್ನಡ ನ್ಯೂಸ್

ಇದೀಗ ವಾಟ್ಸಪ್ ಬಳಕೆದಾರರಿಗೆ ಬಿಗ್ ಶಾಕ್ ದೊರೆತಂತಾಗಿದೆ.ಫೇಸ್​ಬುಕ್​ ಮಾಲೀಕತ್ವದ ವಾಟ್ಸಾಪ್ ಚಾಟ್
ಗೌಪ್ಯವಾಗಿ ಇದೆ ಎಂದು ನಾವು ಅಂದುಕೊಂಡಿದ್ದು ಇದೀಗ ತಪ್ಪು ಎಂದು ಹೊಸ ಅಧ್ಯಯನವೊಂದು ಹೇಳಿದೆ.

Sponsored

ಅತ್ಯಂತ ಪ್ರಸಿದ್ಧ ಚಾಟ್​ ಅಪ್ಲಿಕೇಶನ್​ಗಳಲ್ಲಿ ಒಂದಾದ ವಾಟ್ಸಾಪ್​ ಯಾವುದೇ ಕಾರಣಕ್ಕೂ ಗ್ರಾಹಕರ 
ಖಾಸಗಿ ಸಂದೇಶಗಳನ್ನು ಫೇಸ್​ಬುಕ್​ ಓದಲು ಸಾಧ್ಯವಿಲ್ಲ ಎಂದು ಹೇಳಿತ್ತು.ಆದರೆ ಇದೀಗ ಸುಳ್ಳು ಎಂದು
ಹೇಳಿದೆ.

Advertisement

Advertisement

ಹೊಸ ಬಳಕೆದಾರರು ವಾಟ್ಸಾಪ್​ಗೆ ಸೈನಪ್​ ಆಗುತ್ತಿದ್ದಂತೆಯೇ, ನಿಮ್ಮ ಸಂದೇಶಗಳು ಹಾಗೂ ಕರೆಗಳು ಸುರಕ್ಷಿತವಾಗಿದೆ.
ನೀವು ಸಂಭಾಷಣೆ ನಡೆಸುವ ವ್ಯಕ್ತಿಯ ಹಾಗೂ ನಿಮ್ಮ ನಡುವೆ ವಿಲೇವಾರಿ ಆಗುವ ವಿಚಾರಗಳನ್ನು ಯಾರೂ ಓದುವುದಿಲ್ಲ,
ಕೇಳುವುದೂ ಇಲ್ಲ , ನಿಮ್ಮ ಮಧ್ಯೆ ಇಲ್ಲಿ ಇನ್ಯಾರೂ ಇರುವುದಿಲ್ಲ. ವಾಟ್ಸಾಪ್​ ಕೂಡ..! ಎಂದು ಗೌಪ್ಯತೆಯ
ಬಗ್ಗೆ ದೃಢೀಕರಣ ನೀಡಲಾಗುತ್ತದೆ.

ಆದರೆ ಈ ಎಲ್ಲಾ ದೃಢೀಕರಣವು ಸುಳ್ಳು ಎಂದು ಸಾಬೀತಾಗಿದೆ. ಆಸ್ಟಿನ್​, ಟೆಕ್ಸಾಸ್​, ಡುಬ್ಲಿನ್​ ಹಾಗೂ
ಸಿಂಗಾಪುರದಲ್ಲಿ ಈ ಮೆಸೇಜ್​ಗಳನ್ನು ಓದುವವರಿಗಾಗಿಯೇ ಕಚೇರಿ ಸ್ಥಾಪನೆ ಮಾಡಲಾಗಿದೆ.

ಪ್ರೋ ಪಬ್ಲಿಕಾ ನೀಡಿರುವ ವರದಿಯಲ್ಲಿ ಎಂಡ್​​​ ಟು ಎಂಡ್​ ಎನ್​ಕ್ರಿಪ್ಟೆಡ್​ ಎಂದು ವಾಟ್ಸಾಪ್​ ಹೇಳಿದ್ದರೂ
ಸಹ ಫೇಸ್​ ಬುಕ್​​ ಕಂಪನಿಯೂ 1000ಕ್ಕೂ ಅಧಿಕ ಗುತ್ತಿಗೆ ಕೆಲಸಗಾರರಿಗೆ ವಾಟ್ಸಾಪ್​​ನಲ್ಲಿ ಬಳಕೆದಾರರು
ಮಾಡುವ ಖಾಸಗಿ ಸಂದೇಶಗಳನ್ನು ಓದಲೆಂದೇ ನೇಮಿಸಿದೆ ಎನ್ನಲಾಗಿದೆ.

ಇದು ಮಾತ್ರವಲ್ಲದೇ ಈ ಕಂಪನಿಯು ಬಳಕೆದಾರರ ಕೆಲ ಖಾಸಗಿ ಮಾಹಿತಿಗಳನ್ನು ಅಮೆರಿಕದ ಡಿಪಾರ್ಟ್​ಮೆಂಟ್​
ಆಫ್​ ಜಸ್ಟೀಸ್​ನಂತಹ ಸಾಕಷ್ಟು ಕಾನೂನು ಜಾರಿ ಸಂಸ್ಥೆಯೊಂದಿಗೆ ಹಂಚಿಕೊಂಡಿದೆ ಎನ್ನಲಾಗಿದೆ.

ವಾಟ್ಸಾಪ್​ನಲ್ಲಿ ಬಳಕೆದಾರರ ಖಾಸಗಿ ಸಂಭಾಷಣೆಯ ಮೇಲೆ ಕಣ್ಣಿಡಲು ಸಾಧ್ಯವಿಲ್ಲ ಎಂದು ಫೇಸ್​ಬುಕ್​ 
ಸ್ಥಾಪಕ ಜುಕರ್​ ಬರ್ಗ್​ ಹೇಳಿಕೆ ನೀಡಿದ್ದರು. ಆದರೆ ಇದೀಗ ಪ್ರೋ ಪಬ್ಲಿಕಾ ಈ ಸ್ಪೋಟಕ ಮಾಹಿತಿ ಲಭ್ಯವಾಗಿದೆ.
ವಾಟ್ಸಾಪ್​ನಲ್ಲಿ ಬಳಕೆದಾರರ ಯಾವುದೇ ಖಾಸಗಿ ವಿಚಾರಗಳನ್ನು ನಾವು ನೋಡುವುದಿಲ್ಲ ಎಂದು ಜುಕರ್​ ಬರ್ಗ್​
ಹೇಳಿದ್ದರು.

ಇಲ್ಲಿ ಸಾವಿರಕ್ಕೂ ಅಧಿಕ ಗುತ್ತಿಗೆ ಕೆಲಸಗಾರರು ವಾಟ್ಸಾಪ್​ ಸಂಭಾಷಣೆಯನ್ನು ಕೇಳುವ ಹಾಗೂ ಓದುವ ಮೂಲಕ
ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ಪ್ರೋ ಪಬ್ಲಿಕಾ ಹೇಳಿದೆ.

ಪ್ರೋ ಪಬ್ಲಿಕಾದ ಈ ವರದಿಯ ಬಳಿಕ ಸಿಗ್ನಲ್​ ಹಾಗೂ ಟೆಲಿಗ್ರಾಂನಂತಹ ಅಪ್ಲಿಕೇಶನ್​ಗಳತ್ತ ಜನರು ಇನ್ನಷ್ಟು
ಮನಸ್ಸು ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Advertisement
