# ವಾರಾಂತ್ಯ ನಡೆಯುವ ಪದವಿ ಪರೀಕ್ಷೆ ಮುಂದೂಡಿಕೆ | ಮಂಗಳೂರು ವಿ.ವಿ.ಪ್ರಕಟಣೆ

- Link: https://hosakannada.com/news/vv-exam-news/
- Published: 2021-08-12T21:41:47+00:00
- Author: Praveen Chennavara

ಕೋವಿಡ್ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಸಾರ್ವಜನಿಕ
ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಕಾರಣ ಆ.14 ಮತ್ತು ಆ.28ರಂದು ನಿಗದಿಪಡಿಸಿದ್ದ ಪದವಿ, ಮತ್ತು
ಸ್ನಾತಕೋತ್ತರ ಪದವಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.

Sponsored

ಈ ದಿನಾಂಕದಂದು ನಿಗದಿಪಡಿಸಿದ್ದ ಪರೀಕ್ಷೆಗಳ ದಿನಾಂಕವನ್ನು ಬದಲಾವಣೆ ಮಾಡಿ ಮರು ನಿಗದಿ ಪಡಿಸಿದ್ದು,
ಕೋರ್ಸುವಾರು, ವಿಷಯವಾರು ಪರಿಷ್ಕೃತ ಪರೀಕ್ಷಾ ವೇಳಾ ಪಟ್ಟಿಯನ್ನು ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ
ಹಾಗೂ ಕಾಲೇಜುಗಳ ಮೂಲಕ ಆ.12ರಿಂದ ಪಡೆದುಕೊಳ್ಳಬಹುದಾಗಿದೆ.

Advertisement

Advertisement

ಉಳಿದಂತೆ ಈ ಹಿಂದೆ ಪ್ರಕಟಿಸಿದ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಇರುವುದಿಲ್ಲ ಎಂದು ಮಂಗಳೂರು
ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರ ಪ್ರಕಟಣೆ ತಿಳಿಸಿದೆ.

Advertisement
