# ವಿಟ್ಲ: ಕಾರು ಮತ್ತು ಆಕ್ಟಿವಾ ಡಿಕ್ಕಿ: ಸವಾರನಿಗೆ ಗಾಯ

- Link: https://hosakannada.com/news/vitla-car-and-activa-collide-rider-injured/
- Published: 2026-10-13T11:22:52+00:00
- Author: ಹೊಸಕನ್ನಡ ನ್ಯೂಸ್

ವಿಟ್ಲ: ಕೊಲ್ನಾಡು ಗ್ರಾಮದ ಕುಳಾಲು ಬೊಲ್ಪಾದೆಯ ಅಪಾಯಕಾರಿ ರಸ್ತೆ ತಿರುವಿನಲ್ಲಿ ಮಂಗಳವಾರ ಕಾರು 
ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ನಡೆದಿದ್ದು, ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

Sponsored

ವಿಟ್ಲ ಪಡೂರು ಗ್ರಾಮದ ಕಡಂಬು ನಿವಾಸಿ ಮೇಸ್ತ್ರಿ ವೃತ್ತಿಯ ರಾಮಣ್ಣ ಮೂಲ್ಯ (45) ಗಾಯಗೊಂಡವರು.

Advertisement

Advertisement

ರಾಮಣ್ಣ ಮೂಲ್ಯ ಕುಳಾಲು ಕಡೆಗೆ ಆಕ್ಟಿವಾದಲ್ಲಿ ತೆರಳುತ್ತಿದ್ದು, ಬೊಲ್ಪಾದೆಯ ಅಪಾಯಕಾರಿ ತಿರುವಿನ
ಏರು ರಸ್ತೆಯಲ್ಲಿ ಎದುರಿನಿಂದ ಬಂದ ಮಾರುತಿ ಕಾರು ಆಕ್ಟಿವಾಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿ ರಭಸಕ್ಕೆ ಆಕ್ಟಿವಾ ಜಖಂಗೊಂಡಿದ್ದು, ರಾಮಣ್ಣ ಅವರ ಬಲಗೈ ಮೂಳೆ ಮುರಿದಿದೆ. ಕಾರು ರಸ್ತೆ ಬದಿಯ
ಧರೆಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ.

ಸ್ಥಳೀಯರು ಕೂಡಲೇ ಗಾಯಾಳುವನ್ನು ವಿಟ್ಲದ ಬೆನಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

Advertisement
