# ವಿಷುಕಣಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಮೇ 17 ರಂದು ನಡೆಯುವ 5ನೇ ವರ್ಷದ ವಿಷುಕಣಿ 5.0 ಕಾರ್ಯಕ್ರಮ, ಶಾಸಕರಾದ ಹರೀಶ್ ಪೂಂಜಾ ರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

- Link: https://hosakannada.com/news/visukani-celebration-committee-belthangady-taluk-was-preliminarily-held-under-the-leadership-of-mla-harish-poonja/
- Published: 2026-05-02T17:57:07+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ :ವಿಷುಕಣಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ನಡೆಯುತ್ತಿರುವ 5ನೇ 
ವರ್ಷದ ವಿಷುಕಣಿ 5.0 ಕಾರ್ಯಕ್ರಮವು ಇದೇ ಬರುವ ಮೇ 17, ರವಿವಾರ ಕೃಷ್ಣಾನುಗ್ರಹ ಸಭಾಭವನ ಉಜಿರೆಯಲ್ಲಿ
ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಸಮಾರಂಭದ ಪೂರ್ವಭಾವಿ ಸಭೆಯು ಕಾರ್ಯಕ್ರಮದ ರೂವಾರಿ ಶಾಸಕರಾದ
ಹರೀಶ್ ಪೂಂಜಾ ಇವರ ನೇತೃತ್ವದಲ್ಲಿ ಹವ್ಯಕ ಸಭಾಭವನ ಗುರುವಾಯನಕೆರೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ
ಪ್ರಸಾದ್ ಬಿ. ಎಸ್, ಅನಿಲ್ ಅಕ್ಷರ, ಬಾಲಕೃಷ್ಣ ನೈಮಿಷ, ದಿವಿನೇಶ್ ಚಾರ್ಮಾಡಿ, ಹಾಗೂ ಅನೇಕ ಪ್ರಮುಖರು
ಉಪಸ್ಥಿತರಿದ್ದರು.

Sponsored

Advertisement

Advertisement

Advertisement
