# UPI: ವಂಚಕರಿಗೆ ಕಡಿವಾಣ ಹಾಕಲು RBI ಸೂಪರ್ ಪ್ಲಾನ್ – UPI ನಲ್ಲಿ 10 ಸಾವಿರಕ್ಕೂ ಹೆಚ್ಚಿನ ಪಾವತಿಗೆ ಕಾಯಬೇಕು ‘ಒಂದು ಗಂಟೆ’

- Link: https://hosakannada.com/news/upi-super-plan-to-curb-fraudsters-one-hour-wait-for-payments-above-rs-10-000-on-upi/
- Published: 2026-04-19T10:56:53+00:00
- Author: ಹೊಸಕನ್ನಡ ನ್ಯೂಸ್

UPI: ಹಣ ವರ್ಗಾವಣೆಯಲ್ಲಿನ ವಂಚನೆ ತಡೆಯಲು ಆರ್‌ಬಿಐ UPI ವಹಿವಾಟಿನಲ್ಲಿ ಹೊಸ ನಿಯಮ ಜಾರಿಗೆ ತರುತ್ತಿದ್ದು,
ಈ ನಿಯಮದ ಪ್ರಕಾರ  10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕಾಗುತ್ತದೆ.

Sponsored

ಹೌದು, ಯುಪಿಐ (UPI) ಮೂಲಕ ಅಪರಿಚಿತರಿಗೆ 10,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸುವಾಗ
ಆ ಹಣ ತಕ್ಷಣವೇ ಕಡಿತವಾಗದಂತೆ ತಡೆಹಿಡಿಯುವ ನೂತನ ಪ್ರಸ್ತಾವನೆಯನ್ನು ಆರ್‌ಬಿಐ ಮಂಡಿಸಿದೆ.ಆರ್‌ಬಿಐ
ಸಿದ್ಧಪಡಿಸಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಒಬ್ಬ ಬಳಕೆದಾರ ತಾನು ಈ ಹಿಂದೆ ಎಂದೂ ಹಣ ಕಳುಹಿಸದ ವ್ಯಕ್ತಿಗೆ(
New Payee) 10,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸಿದರೆ, ಆ ವಹಿವಾಟು ಪೂರ್ಣಗೊಳ್ಳಲು
ಕನಿಷ್ಠ ಒಂದು ಗಂಟೆಯ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಸೈಬರ್ ಕಳ್ಳರು ಹ್ಯಾಕ್ ಮಾಡಿ ಅಥವಾ ಇನ್ಯಾವುದೋ
ರೀತಿಯಲ್ಲಿ ಯುಪಿಐ ಮೂಲಕ ಹಣವನ್ನು ಕ್ಷಣಾರ್ಧದಲ್ಲಿ ವರ್ಗವಣೆ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಲು
ಒಂದು ಗಂಟೆ ಕಾಯಬೇಕು.

Advertisement

Advertisement

ಈ ‘ಟೈಮ್ ಬಫರ್’ ಅವಧಿಯಲ್ಲಿ ಬ್ಯಾಂಕ್ ಹಣವನ್ನು ತನ್ನಲ್ಲೇ ಹಿಡಿದಿಟ್ಟುಕೊಳ್ಳುತ್ತದೆ. ಒಂದು ವೇಳೆ
ಬಳಕೆದಾರರು ಆಕಸ್ಮಿಕವಾಗಿ ಅಥವಾ ವಂಚಕರ ಒತ್ತಡಕ್ಕೆ ಮಣಿದು ಹಣ ಕಳುಹಿಸಿದ್ದರೆ, ಆ ಒಂದು ಗಂಟೆಯೊಳಗೆ
ವಹಿವಾಟನ್ನು ರದ್ದುಗೊಳಿಸಲು (Cancel) ಅವಕಾಶವಿರುತ್ತದೆ.ಈ ನಿಯಮವು ದೈನಂದಿನ ಸಣ್ಣಪುಟ್ಟ ವ್ಯವಹಾರಗಳ
ಮೇಲೆ ಯಾವುದೇ ಪ್ರಭಾವ ಬೀರದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

**ಹಳೇ ಯುಪಿಐ ಪಾವತಿಗಳಿಗೆ ಸಮಸ್ಯೆ ಇಲ್ಲ**

ಈ ನಿಯಮ ಹೊಸಬರಿಗೆ ಅನ್ವಯವಾಗಲಿದೆ. ಅಂದರೆ ಈಗಾಗಲೇ ಹಣ ವರ್ಗಾವಣೆ ಮಾಡುತ್ತಿರುವ ಕಾಂಟಾಕ್ಟ್ ನಂಬರ್
ಅಥವಾ ಖಾತೆಗಳಿಗೆ ಅನ್ವಯವಾಗುವುದಿಲ್ಲ. ಸೈಬರ್ ಕ್ರೈಂ ಗೆ ಕಡಿವಾಣ ಹಾಕಲು ರಿಸರ್ವ್ ಬ್ಯಾಂಕ್ ಹೊಸ
ಪ್ಲಾನ್ ಮಾಡಿದೆ.

Advertisement
