# Union Budget 2024: ಕೇಂದ್ರ ಬಜೆಟ್‌ನಲ್ಲಿ ಸರಕಾರಿ ನೌಕರರಿಗೆ ಗುಡ್‌ನ್ಯೂಸ್‌ ಸಾಧ್ಯತೆ!!!

- Link: https://hosakannada.com/news/union-budget-2024-expectations-for-central-government-employees-from-nirmala-sitharaman/
- Published: 2024-02-01T08:37:19+00:00
- Author: ಕೆ. ಎಸ್. ರೂಪಾ

Nirmala SItaraman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitaraman) ಇಂದು(
ಫೆ.1) ರಂದು ಮೋದಿ ಸರಕಾರದ ಕೊನೆಯ ಬಜೆಟ್‌ ಅನ್ನು ಮಂಡನೆ ಮಾಡಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬಜೆಟ್‌
ಮಂಡನೆಯಾಗಲಿದ್ದು, ಇದಕ್ಕೆ ಎಲ್ಲಾ ತಯಾರಿ ನಡೆದಿದೆ.

Sponsored

ಜನರು ಹಣಕಾಸು ಸಚಿವರಿಂದ ಈ ಬಾರಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರಲ್ಲಿ ಸರಕಾರಿ ನೌಕರರ
ಬಹುಕಾಲದ ಬೇಡಿಕೆ ಈ ಭಾರಿ ಈಡೇರುವ ವಿಶ್ವಾಸವನ್ನು ಹೊಂದಿದ್ದಾರೆ ಎನ್ನಲಾಗಿದೆ.

Advertisement

Advertisement

**ಇದನ್ನೂ ಓದಿ: [Parliment attack : ಸಂಸತ್ ದಾಳಿ ನಡೆಸಿದವರಿಗೆ ವಿಪಕ್ಷಗಳ ನಂಟು ?! ಪೋಲಿಸರಿಂದ ಕರೆಂಟ್ ಶಾಕ್, ಚಿತ್ರ ಹಿಂಸೆ !! ದಾಳಿಕೋರರಿಂದ ಸ್ಪೋಟಕ ಸತ್ಯ ಬಯಲು !!](https://hosakannada.com/2024/02/01/parliment-attack-truth-is-revealed-by-the-attackers-who-attacked-inside-the-parliament-building-in-delhi/)**

18 ತಿಂಗಳ ಫ್ರೀಜ್‌ ಬಾಕಿ ಪಾವತಿಗಾಗಿ ಸರಕಾರಿ ನೌಕರರು ಕಾಯುತ್ತಿದ್ದಾರೆ. ಕೊರೊನಾ ಅವಧಿಯಲ್ಲಿ 2020
ರಿಂದ 2021ರ ವರೆಗೆ 18 ತಿಂಗಳವರೆಗೆ ಡಿಎ ಅಂದರೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಿಲ್ಲ ಸರಕಾರ.
ಈ ಬಾರಿಯ ಬಜೆಟ್‌ನಲ್ಲಿ ಈ ಕುರಿತು ಸರಕಾರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಹಾಗೆನೇ ಎಂಟನೇ ವೇತನ ಆಯೋಗವನ್ನು (8th Pay Commission) ಕೂಡಾ ಸರಕಾರ ಇನ್ನೂ ರಚಿಸಿಲ್ಲ. ಈ ಕುರಿತು
ನೌಕರರ ಸಂಘಟನೆಗಳು ಹೋರಾಟ ನಡೆಸುತ್ತಲೇ ಇದೆ. ಈ ಬಾರಿ ವೇತನ ಹೆಚ್ಚಿಸುವ ಸಮಯ ಬಂದಿದೆ ಎಂದು ತಜ್ಞರ
ಅಭಿಪ್ರಾಯ.

ಕಳೆದ ಮೂರು ವರ್ಷಗಳಿಂದ ಸರಕಾರಕ್ಕೆ ಕೊರೊನಾ ಲಾಕ್‌ಡೌನ್‌ ಒಂದು ಸವಾಲಾಗಿತ್ತು. ಈ ಕಾರಣಕ್ಕೆ ಸರಕಾರಿ
ನೌಕರರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಿಲ್ಲ. ಹಾಗಾಗಿ ಈ ಬಾರಿ ಸರಕಾರ ಸಿಹಿ ಸುದ್ದಿ
ನೀಡುವ ಸಾಧ್ಯತೆ ಇದೆ.

Advertisement
