# ಉಡುಪಿ: ಅರಬ್ಬಿ ಸಮುದ್ರದಲ್ಲಿ 3 ಗಂಟೆಯಿಂದ ಈಜುತ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

- Link: https://hosakannada.com/news/udupi-rescue-of-a-mentally-unstable-person-who-was-swimming-in-the-arabian-sea-for-3-hours/
- Published: 2026-08-18T08:37:54+00:00
- Author: ಹೊಸಕನ್ನಡ ನ್ಯೂಸ್

ಉಡುಪಿ: ಅರಬ್ಬಿ ಸಮುದ್ರದಲ್ಲಿ ಸತತ 3 ಗಂಟೆಗಳಿಂದ ಈಜುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ಭಾನುವಾರ
ರಕ್ಷಣೆ ಮಾಡಲಾಗಿದೆ. ಕಾಡಿಪಟ್ಟ ನಿವಾಸಿ ಯತೀಶ್‌ (38) ರಕ್ಷಣೆಗೊಳಗಾದ ವ್ಯಕ್ತಿ. ಯತೀಶ್‌ ಅವರು 
ಈ ಹಿಂದೆ ಕೂಡಾ ಎರಡು ಬಾರಿ ಇದೇ ರೀತಿಯ ಕೃತ್ಯ ಮಾಡಲು ಪ್ರಯತ್ನ ಮಾಡಿದ್ದರು. ಆದರೆ ನಿವಾಸಿಗಳು ರಕ್ಷಣೆ
ಮಾಡಿದ ದಡಕ್ಕೆ ಕರೆತಂದಿದ್ದರು.

Sponsored

ಭಾನುವಾರ ಮಧ್ಯಾಹ್ನ ಯತೀಶ್‌ ಅರಬ್ಬಿ ಸಮುದ್ರಕ್ಕೆ ಇಳಿದು ಈಜಲಾರಂಭಿಸಿದ್ದು, ಸಮುದ್ರ ಪ್ರಕ್ಷುಬದ್ಧವಾಗಿದ್ದ
ಕಾರಣ ಅವರಿಗೆ ಅಪಾಯವಾಗುವ ಸಾಧ್ಯತೆಯಿತ್ತು. ದೋಣಿಯಲ್ಲಿ ಮೀನುಗಾರರು ಹೋಗಿ ಅವರನ್ನು ಎಳೆಯಲು ಅರ್ಧಗಂಟೆಗೂ
ಹೆಚ್ಚು ಸಮಯ ಪ್ರಯತ್ನ ಮಾಡಿದರೂ ಅವರು ತಪ್ಪಿಸಿಕೊಳ್ಳುತ್ತಿದ್ದರು.

Advertisement

Advertisement

ಈ ಕುರಿತು ಮಾಹಿತಿ ಪಡೆದ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಅವರು ಈಶ್ವರ್‌ ಮಲ್ಪೆ ಅವರಿಗೆ ಮಾಹಿತಿ
ನೀಡಿದ್ದು, ಸ್ಥಳಕ್ಕೆ ಬಂದ ಈಶ್ವರ್‌ ಮೂರು ನಾಟಿಕಲ್‌ ಮೈಲು ದೂರದಲ್ಲಿ ಈಜುತ್ತಿದ್ದ ಯತೀಶ್‌ ಇರುವಲ್ಲಿ
ಈಜುತ್ತಾ ತೆರಳಿ ರಕ್ಷಣೆ ಮಾಡಿದ್ದಾರೆ.

 

Advertisement
