# ಉಡುಪಿ ಜಿಲ್ಲೆಯಾದ್ಯಂತ ನಾಳೆ ಶಾಲೆಗಳಿಗೆ ರಜೆ ಇಲ್ಲ

- Link: https://hosakannada.com/news/udupi-no-holiday-for-school/
- Published: 2022-07-11T19:35:38+00:00
- Author: ಹೊಸಕನ್ನಡ ನ್ಯೂಸ್

ಉಡುಪಿ ಜಿಲ್ಲೆಯಾದ್ಯಂತ ಮಳೆ ಇಳಿಮುಖವಾಗಿದ್ದು, ರೆಡ್ ಅಲರ್ಟ್ ಬದಲಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಹಾಗೂ ಇತರ ಶಿಕ್ಷಣ ಸಂಸ್ಥೆಗಳು ಮುಂಜಾಗ್ರತಾ
ಕ್ರಮ ವಹಿಸಿ _ಜು.12_ ರಿಂದ ಕಾರ್ಯ ನಿರ್ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ತಿಳಿಸಿದ್ದಾರೆ.
ಏನಾದರೂ ಸಮಸ್ಯೆಗಳಿದ್ದರೆ ಶಿಕ್ಷಣ ಸಂಸ್ಥೆಗಳ ಮೇಲಾಧಿಕಾರಿಗಳ ಒಪ್ಪಿಗೆ ಪಡೆದು ಸ್ಥಳೀಯವಾಗಿ ನಿರ್ಧಾರ
ಕೈಗೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sponsored

Advertisement

Advertisement

Advertisement
