# ಉಡುಪಿ: ಜನಗಣತಿ ನೆಪದಲ್ಲಿ ಬಂದು ವೃದ್ಧೆಯ ಚಿನ್ನದ ಸರ ದೋಚಿದ ಖದೀಮರು

- Link: https://hosakannada.com/news/udupi-miscreants-steal-elderly-womans-gold-chain-after-posing-as-census-officials/
- Published: 2026-10-09T11:44:42+00:00
- Author: ಹೊಸಕನ್ನಡ ನ್ಯೂಸ್

 

Sponsored

ಜನಗಣತಿ ಹೆಸರಲ್ಲಿ ಮನೆಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು 74 ವರ್ಷದ ವೃದ್ಧೆಯನ್ನು ಕೆಳಗೆ ತಳ್ಳಿ
ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೋಚಿ ಪರಾರಿಯಾಗಿರುವ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ
ನಿಟ್ಟೂರಿನಲ್ಲಿ ನಡೆದಿದೆ.

Advertisement

Advertisement

ಮನೆಗೆ ಬಂದ ಖದೀಮರು ವೃದ್ಧೆಯನ್ನು ಬಲವಾಗಿ ದೂಡಿ ಕೆಳಗೆ ಬೀಳಿಸಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು
30 ಗ್ರಾಂ ತೂಕದ ಗಾರ್ನೇಟ್ ಮಣಿ ಇರುವ ಬೆಲೆಬಾಳುವ ಚಿನ್ನದ ಸರವನ್ನು ಬಲವಂತವಾಗಿ ಎಳೆದುಕೊಂಡು ಸ್ಥಳದಿಂದ
ಕಾಲ್ಕಿತ್ತಿದ್ದಾರೆ. ಘಟನೆ ಕುರಿತು ಶ್ರೀನಿವಾಸ ಕಾರಂತ್ ಅವರು ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
