# ಎರಡು ತಲೆ, ಮೂರು ಕಣ್ಣು ಇರುವ ಕರುವಿನ ಜನನ | ನವರಾತ್ರಿ ದಿನ ಜನಿಸಿದ್ದರಿಂದ ದುರ್ಗಾಮಾತೆಯ ಪ್ರತಿರೂಪ ಎಂದು ಕರುವಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಗ್ರಾಮಸ್ಥರು

- Link: https://hosakannada.com/news/two-heads-and-three-eyes/
- Published: 2021-10-13T09:53:59+00:00
- Author: ಹೊಸಕನ್ನಡ

ಪ್ರಪಂಚದಲ್ಲಿ ಒಮ್ಮೊಮ್ಮೆ ಚಿತ್ರ ವಿಚಿತ್ರವಾದ ಘಟನೆಗಳು ಸಂಭವಿಸುತ್ತಿರುತ್ತವೆ. ಅದರಲ್ಲೂ ವಿಚಿತ್ರವೆನಿಸುವ
ಪ್ರಾಣಿಗಳ ಜನನವಂತೂ ಎಲ್ಲರನ್ನೂ ಒಂದು ಕ್ಷಣ ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಹಾಗೆಯೇ ಇಲ್ಲೊಂದು
ವಿಶೇಷವಾದ ಕರುವಿನ ಜನನವಾಗಿದೆ.

Sponsored

2 ತಲೆ, ಮೂರು ಕಣ್ಣು ಇರುವ ಕರುವಿನ ಜನನವಾಗಿದೆ. ನವರಾತ್ರಿ ಸಂದರ್ಭದಲ್ಲಿಯೇ ಇಂಥಹ ವಿಚಿತ್ರ ಕರುವೊಂದು
ಜನಿಸಿದ್ದರಿಂದ ದುರ್ಗಾದೇವಿಯ ಅವತಾರ ಎಂದು ಜನರು ಪೂಜೆ ಮಾಡಿರುವ ಘಟನೆ ಒರಿಸ್ಸಾದ ನಬ್ರಂಗ್​ಪುರದಲ್ಲಿ
ನಡೆದಿದೆ. ಅಂತೆಯೇ ಕರುವಿನ ವಿಡಿಯೋ ಸಖತ್ ವೈರಲ್ ಆಗಿದೆ.

Advertisement

Advertisement

ನಬ್ರಂಗ್‍ಪುರದ ಧನಿರಾಂ ಅವರ ಕೊಟ್ಟಿಗೆಯಲ್ಲಿರುವ ಹಸುವಿಗೆ ಈ ಅಪರೂಪವಾದ, ವಿಶೇಷವಾದ ಕರು ಜನಿಸಿದೆ.
ಈ ಕರುಗೆ ಎರಡು ತಲೆ, ಮೂರು ಕಣ್ಣುಗಳಿವೆ. ಹೀಗೆ ವಿಶೇಷವಾಗಿ ಜನಿಸಿದ ಈ ಕರುವನ್ನು ನೋಡಿದ ಹಸುವಿನ
ಮಾಲೀಕ ಕೂಡ ಅಚ್ಚರಿ ಪಟ್ಟಿದ್ದಾರೆ. ಬಳಿಕ ಈ ವಿಷಯವನ್ನು ಊರಿನವರಿಗೆ ತಿಳಿಸಿದ್ದಾರೆ. ಕರು ಆರೋಗ್ಯದಿಂದಿದ್ದು,
ದುರ್ಗಾ ಮಾತೆಯ ಪ್ರತಿರೂಪ ಎಂದು ಗ್ರಾಮಸ್ಥರು ಪೂಜೆ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆ ಧನಿರಾಂ ಈ ಹಸುವನ್ನು ಖರೀದಿಸಿದ್ದರು. ಈ ಹಸು ಇತ್ತೀಚೆಗೆ ಗರ್ಭ ಧರಿಸಿತ್ತು.
ನವರಾತ್ರಿಯ ದಿನವೇ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಹೀಗೆ ವಿಶೇಷವಾಗಿರುವ ಈ ಕರು ಎಲ್ಲರ 
ಗಮನ ಸೆಳೆಯುತ್ತಿದೆ.

> People in the locality of Bijapara village have begun worshipping a two headed
> calf as [#Durga](https://x.com/hashtag/Durga?src=hash&ref_src=twsrc%5Etfw) Avatar
> 
> After it was born with two heads and three eyes on the occasion of [#Navratri](https://x.com/hashtag/Navratri?src=hash&ref_src=twsrc%5Etfw)
> to a farmer in Odisha's Nabrangpur District. [#DurgaPuja](https://x.com/hashtag/DurgaPuja?src=hash&ref_src=twsrc%5Etfw)
> [@aajtak](https://x.com/aajtak?ref_src=twsrc%5Etfw) [@IndiaToday](https://x.com/IndiaToday?ref_src=twsrc%5Etfw)
> [pic.twitter.com/tz9i9mpJ0O](https://t.co/tz9i9mpJ0O)
> — SUFFIAN (@iamsuffian) [October 12, 2021](https://x.com/iamsuffian/status/1447814085509201921?ref_src=twsrc%5Etfw)

ಮುಕ್ಕಣ್ಣನಂತಿರುವ ಈ ಕರುವಿಗೆ ಎರಡು ತಲೆಗಳಿರುವುದರಿಂದ ಹಾಲು ಕುಡಿಯಲು ಕಷ್ಟವಾಗುತ್ತಿದೆ. ಹಸುವಿನ
ಕೆಚ್ಚಲಿನಿಂದ ಕರುವಿಗೆ ಹಾಲು ಕುಡಿಯುವುದು ಕಷ್ಟವಾದ್ದರಿಂದ ಹೊರಗಿನಿಂದ ಪ್ಯಾಕೆಟ್ ಹಾಲನ್ನು ಖರೀದಿಸಿ
ನೀಡಲಾಗುತ್ತಿದೆ. ಈ ಕರುವಿನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Advertisement
