# Bengaluru : ವಿಲ್ಸನ್ ಗಾರ್ಡ್‌ನ್ ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್- ಸ್ಪೋಟಗೊಂಡಿದ್ದು ಸಿಲಿಂಡರ್ ಅಲ್ಲ, ಹಾಗಿದ್ರೆ ಮತ್ತೇನು?

- Link: https://hosakannada.com/news/twist-in-wilson-garden-blast-case-it-wasnt-a-cylinder-that-exploded-so-what-else/
- Published: 2025-08-15T16:02:59+00:00
- Author: ಹೊಸಕನ್ನಡ ನ್ಯೂಸ್

Bengaluru : ಇಂದು ಬೆಳಗ್ಗೆ ವಿಲ್ಸನ್‌ ಗಾರ್ಡ್‌ನಲ್ಲಿ ಬರುವ ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲೋನಿಯಲ್ಲಿ
ಸಿಲಿಂಡರ್ ಸ್ಫೋಟಗೊಂಡು 8 ವರ್ಷದ ಓರ್ವ ಬಾಲಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ನಡೆದಿತ್ತು.
ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸ್ಪೋಟಗೊಂಡದ್ದು ಸಿಲಿಂಡರ್ ಅಲ್ಲ, ಫ್ರಿಡ್ಜ್
ಎಂಬುದು ಬಯಲಾಗಿದೆ.

Sponsored

ಹೌದು, ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟದಿಂದ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ
ಹೇಳಲಾಗಿತ್ತು. ಆದರೆ ಮನೆಯ ಸಿಲಿಂಡರ್‌ಗೆ ಯಾವುದೇ ಹಾನಿಯಾಗಿಲ್ಲ. ಈ ಸಿಲಿಂಡರ್ ಸ್ಫೋಟಗೊಂಡಿಲ್ಲ.
ಹೀಗಾಗಿ ಹಲವು ಅನುಮಾನಗಳು ವ್ಯಕ್ತವಾಗಿತ್ತು. ಸ್ಫೋಟದ ತೀವ್ರತೆ ಹೆಚ್ಚಾಗಿದ್ದ ಕಾರಣ ಪೊಲೀಸರು ತನಿಖೆ
ಚುರಕುಗೊಳಿಸಿದ್ದರು. ಇತ್ತ ಎಸ್‌ಡಿಆರ್‌ಎಫ್ ಕಾರ್ಯಾಚರಣೆ ವೇಳೆ ಸ್ಫೋಟದ ಕಾರಣ ಬಹಿರಂಗವಾಗಿದೆ. ಮನೆಯಲ್ಲಿದ್ದ
ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಅನ್ನೋದು ಬಯಲಾಗಿದೆ.

Advertisement

Advertisement

ಇನ್ನು ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ. ಈ ಮಾಹಿತಿ ಬಯಲಾಗುತ್ತಿದ್ದಂತೆ ಎಸ್‌ಡಿಆರ್‌ಎಫ್
ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಈ ಮಾಹಿತಿ ಖಚಿತವಾಗುತ್ತಿದ್ದಂತೆ SDRF ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

Advertisement
