# ಸಂತ ಫಿಲೋಮಿನಾ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ, ಐಸಿಟಿ ಮೂಲಕ ಬೋಧನಾ ಪದ್ಧತಿಗಳ ಪರಿವರ್ತನೆ

- Link: https://hosakannada.com/news/transformation-of-teaching-methods-through-artificial-intelligence-and-ict-at-st-philomena-college/
- Published: 2026-08-21T17:40:46+00:00
- Author: ಹೊಸಕನ್ನಡ ನ್ಯೂಸ್

ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ಸ್
ವಿಭಾಗಗಳು ಹಾಗೂ ಐಕ್ಯುಎಸಿ ಸಹಯೋಗದಲ್ಲಿ “ಟ್ರಾನ್ಫಾರ್ಮಿಂಗ್‌ ಟೀಚಿಂಗ್‌ ಲರ್ನಿಂಗ್‌ ಪ್ರಾಕ್ಟೀಸಸ್‌
ಥ್ರೂ ಐಸಿಟಿ ಡ್‌ ಎಐ” ಎಂಬ ವಿಷಯದ ಕುರಿತು ಐದು ದಿನಗಳ ಎಫ್‌ ಡಿಪಿ ಇತ್ತೀಚೆಗೆ ಕಾಲೇಜಿನ ಟೆಕ್‌ 
ಹಬ್‌ನಲ್ಲಿ ನಡೆಯಿತು.

Sponsored

ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಉದ್ಘಾಟಿಸಿದರು. ಈ ಸಂದರ್ಭದಲ್ಲಿ
ಮಾತನಾಡಿದ ಅವರು, ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಅಧ್ಯಾಪಕರು ನಿರಂತರವಾಗಿ
ಹೊಸ ಜ್ಞಾನ ಮತ್ತು ತಂತ್ರಜ್ಞಾನಗಳನ್ನು ಕಲಿಯಬೇಕು.

Advertisement

Advertisement

ಐದು ದಿನಗಳ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ICT ಆಧಾರಿತ ಬೋಧನೆ, ವಿಷಯ ರಚನೆ, ಮೌಲ್ಯಮಾಪನ,
ವಿದ್ಯಾರ್ಥಿ ತೊಡಗಿಸಿಕೊಳ್ಳುವಿಕೆ, ದೃಶ್ಯ ವಿಷಯ ರಚನೆ, ಸಂವಾದಾತ್ಮಕ ಬೋಧನೆ, ಎಐ ಅನಾಲಿಟಿಕ್ಸ್‌
ಹಾಗೂ ಡಿಜಿಟಲ್ ಪೋರ್ಟ್‌ಫೋಲಿಯೊ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ
ನೀಡಲಾಯಿತು.

ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಕಂಪ್ಯೂಟರ್‌ ಅಪ್ಲಿಕೇಶನ್ ವಿಭಾಗಗಳ ಡೀನ್‌ ಡಾ| ವಿನಯಚಂದ್ರ,
ಸಹಾಯಕ ಪ್ರಾಧ್ಯಾಪಕರುಗಳಾದ ಡಾ| ಗೀತಾ ಪೂರ್ಣಿಮಾ ಕೆ, ಅಕ್ಷತಾ ಬಿ, ಸುರಕ್ಷಾ ಎಸ್. ಫಾತಿಮಾತ್‌ ಸಾನಿದ,
ನಿರೀಕ್ಷಾ ಆರ್ ಅಧ್ಯಾಪಕರಿಗೆ ಸಹಾಯಕವಾಗುವ ವಿವಿಧ ಎಐ ಅಪ್ಲಿಕೇಶನ್‌ ಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆ
ನೀಡಿದರು. ಶ್ರೀಮತಿ ಅಕ್ಷತಾ ಬಿ., ಕು. ರಶ್ಮಿ ವಿ. ಮತ್ತು ಕು. ಚೈತನ್ಯ ಅವರು ತರಬೇತುದಾರರಾಗಿ ಕಾರ್ಯಕ್ರಮಕ್ಕೆ
ಸಹಕರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರಿಗೆ ವಿವಿಧ ಎಐ ಪರಿಕರಗಳನ್ನು ಪ್ರಾಯೋಗಿಕವಾಗಿ ಬಳಸುವ ಅವಕಾಶ ಕಲ್ಪಿಸಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್‌
ಮೊಂತೇರೊರವರು “ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ಅಧ್ಯಾಪಕರು ಸದಾ ಹೊಸ ವಿಚಾರಗಳು 
ಮತ್ತು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 
ಕಾಲೇಜಿನ ಐಕ್ಯುಎಸಿ ಸಂಯೋಜಕರಾದ ಡಾ| ಎಡ್ವಿನ್‌ ಎಸ್‌ ಡಿಸೋಜ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಡಾ| ವಿನಯಚಂದ್ರ ವಂದನಾರ್ಪಣೆ ಗೈದರು. ಡಾ| ಗೀತಾ ಪೂರ್ಣಿಮಾ ಕೆ ಕಾರ್ಯಕ್ರಮ ನಿರೂಪಿಸಿದರು. ಎಫ್‌ಡಿಪಿಯಲ್ಲಿ
ಭಾಗವಹಿಸಿದ ಡಾ| ಭಾರತಿ ಎಸ್‌ ರೈ, ಡಾ| ರಾಧಾಕೃಷ್ಣ ಗೌಡ ವಿ, ಜಾನ್ಸನ್‌ ಡೇವಿಡ್‌ ಸಿಕ್ವೇರಾ, ಧನ್ಯ
ಪಿ ಟಿ, ತೇಜಸ್ವಿ ಭಟ್‌, ಹಾಗೂ ಶಿವಾನಿ ಮಲ್ಯ ಅನಿಸಿಕೆ ವ್ಯಕ್ತಪಡಿಸಿದರು.

Advertisement
