# ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಬರೋಬ್ಬರಿ ರೂ.20,000/- ದಂಡ ವಿಧಿಸಿದ ಸಂಚಾರಿ ಪೊಲೀಸರು : ಅಷ್ಟಕ್ಕೂ ಇವರು ಯಾವ ನಿಯಮ ಉಲ್ಲಂಘನೆ ಮಾಡಿದ್ದು ?

- Link: https://hosakannada.com/news/traffic-rules-violation/
- Published: 2022-04-02T20:45:39+00:00
- Author: Mallika

ಉತ್ತರ ಪ್ರದೇಶದ ಗಾಝಿಯಾಬಾದ್ ಮೂಲದ ವ್ಯಕ್ತಿಯೊಬ್ಬರಿಗೆ ಸಂಚಾರಿ ಪೊಲೀಸರು ಬರೋಬ್ಬರಿ ಇಪ್ಪತ್ತು 
ಸಾವಿರ ಮೊತ್ತದ ದಂಡವನ್ನು ವಿಧಿಸಿದ್ದಾರೆ. ಕಾರಣವೇನೆಂದರೆ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ
ಯುವಕರ ಗುಂಪೊಂದು ವಾಹನ ಸಂಚಾರ ಇರುವ ರಸ್ತೆಯಲ್ಲೇ ಕಾರಿನ ಛಾವಣಿಯ ಮೇಲೆ ಮದ್ಯ ಸೇವಿಸಿ ಡ್ಯಾನ್ಸ್
ಮಾಡಿದ್ದಾರೆ.

Sponsored

 https://twitter.com/scribe_prashant/status/1510073869977395204?ref_src=twsrc%5Etfw%
7Ctwcamp%5Etweetembed%7Ctwterm%5E1510073869977395204%7Ctwgr%5E%7Ctwcon%5Es1_c10&
ref_url=http%3A%2F%2Fapi-news.dailyhunt.in%2F

ಯುವಕರಈ ರೀತಿಯ ವರ್ತನೆ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ವೇಳೆ ಅದೇ ರಸ್ತೆಯಲ್ಲೇ ಸಂಚರಿಸುತ್ತಿದ್ದ
ಇನ್ನೊಂದು ಕಾರಿನವರು ಆ ಯುವಕರ ಈ ಪುಂಡಾಟಿಕೆಯ ವಿಡಿಯೋ ಮಾಡಿ ಗಾಝಿಯಾಬಾದ್ ಪೊಲೀಸರಿಗೆ ಟ್ವಿಟರ್ 
ಮೂಲಕ ಟ್ಯಾಗ್ ಮಾಡಿದ್ದಾರೆ. ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Advertisement

Advertisement

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಾಝಿಯಾಬಾದ್ ಪೊಲೀಸರು ಕೂಡಲೇ ಕಾರಿನ ಮಾಲಕರಿಗೆ ಸಂಚಾರಿ ನಿಯಮ
ಉಲ್ಲಂಘನೆಗೆ ಸಂಬಂಧಿಸಿ ಇಪ್ಪತ್ತು ಸಾವಿರ ರೂಪಾಯಿ ದಂಡ ಕಟ್ಟುವಂತೆ ನೊಟೀಸ್ ಕಳುಹಿಸಿದ್ದಾರೆ. ಅಲ್ಲದೆ
ಪೊಲೀಸರು ವಾಹನ ಮಾಲಕರಿಗೆ ಕಳುಹಿಸಿದ ನೊಟೀಸ್ ನ ಪ್ರತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

![](https://hosakannada.com/wp-content/uploads/2022/04/IMG_20220402_204253-572x1024.
jpg)

Advertisement
