# ನಾಳೆ ಬೆಳ್ತಂಗಡಿಯ ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್‌ನಲ್ಲಿ “ಕುಷ್ಮಾ” ಪ್ರಶಸ್ತಿ ಪ್ರದಾನ ಸಮಾರಂಭ

- Link: https://hosakannada.com/news/tomorrow-at-beltangadis-siri-matrushree-industrial-park-the-kushma-award-ceremony/
- Published: 2026-10-12T18:22:41+00:00
- Author: ಹೊಸಕನ್ನಡ ನ್ಯೂಸ್

ಉಜಿರೆ,ದಿ.ಅ.12 : ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ (ರಿ.) (Karnataka
Unaided PU College Management Association – KUPMA/KUPMMA), ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ
ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆರು ಮಂದಿ ಶಿಕ್ಷಕರಿಗೆ ‘ದಕ್ಷಿಣ ಕನ್ನಡ ಜಿಲ್ಲಾ ಕುಷ್ಮಾ 
ಉತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಅಕ್ಟೋಬರ್ 13ರಂದು ಬೆಳ್ತಂಗಡಿಯ ಸಿರಿ ಮಾತೃಶ್ರೀ
ಕೈಗಾರಿಕಾ ಪಾರ್ಕ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವು ಸಂಜೆ 4.30ಕ್ಕೆ ಆರಂಭವಾಗಲಿದ್ದು,
ಅದಕ್ಕೂ ಮುನ್ನ ಸಂಜೆ 3.30ಕ್ಕೆ ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್‌ಗೆ ಭೇಟಿ ನೀಡುವ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ.

Sponsored

ಈ ಸಾಲಿನ ‘ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ
ವಿಭಾಗದ ಉಪನ್ಯಾಸಕ ಪ್ರೊ. ಅನಿಲ್ ಮಸ್ಕರೇನಸ್, ಮೂಡುಬಿದಿರೆಯ ಎಕ್ಸ್‌ಲೆಂಟ್ ಪದವಿಪೂರ್ವ ಕಾಲೇಜಿನ
ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಪ್ರಶಾಂತಾ ರಾಮಚಂದ್ರ ಹೆಗ್ಡೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ
ಪದವಿಪೂರ್ವ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಪ್ರಸನ್ನ ಕುಮಾರ್ ಐತಾಳ್, ಶ್ರೀ ಶಾರದಾ ಪದವಿಪೂರ್ವ
ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ನಾಯಕ್ ಕೆ., ಶ್ರೀ ರಾಮಕೃಷ್ಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ
ಯಶೋಧ ಯು. ಶೆಟ್ಟಿ ಹಾಗೂ ಮಂಗಳೂರಿನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ
ಕರುಣಾಕರ ಬಳ್ಳೂರು ಆಯ್ಕೆಯಾಗಿದ್ದಾರೆ.

Advertisement

Advertisement

ಸಮಾರಂಭದಲ್ಲಿ ರಾಜ್ಯ ಕುಷ್ಮಾ ಸಮಿತಿಯ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್ ಪ್ರಾಸ್ತಾವಿಕ 
ಮಾತುಗಳನ್ನಾಡಲಿದ್ದು, ರಾಜ್ಯ ಕುಷ್ಮಾ ಸಮಿತಿಯ ಗೌರವಾಧ್ಯಕ್ಷ ಡಾ. ಎಂ. ಬಿ. ಪುರಾಣಿಕ್ ಕಾರ್ಯಕ್ರಮವನ್ನು
ಉದ್ಘಾಟಿಸಲಿದ್ದಾರೆ. ರಾಜ್ಯ ಕುಷ್ಮಾ ಸಮಿತಿಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸಮಾರಂಭದ ಅಧ್ಯಕ್ಷತೆ
ವಹಿಸಲಿದ್ದಾರೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆ, ಉಜಿರೆಯ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ ಅವರು ಘನ
ಉಪಸ್ಥಿತರಿರಲಿದ್ದಾರೆ. ರಾಜ್ಯ ಕುಷ್ಮಾ ಸಮಿತಿಯ ಗೌರವಾಧ್ಯಕ್ಷರಾದ ಡಾ. ಕೆ. ಸಿ. ನಾಯ್ಕ ಮತ್ತು ಕೆ.
ರಾಧಾಕೃಷ್ಣ ಶೆಣೈ, ಉಪಾಧ್ಯಕ್ಷ ಡಾ. ಸುಧಾಕರ ಶೆಟ್ಟಿ ಹಾಗೂ ಮೈಸೂರಿನ ಜಂಟಿ ಕಾರ್ಯದರ್ಶಿ ವಿಶ್ವನಾಥ
ಶೇಷಾಛಲ ಉಪಸ್ಥಿತರಿರಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕುಷ್ಮಾ ಸಮಿತಿಯ ಗೌರವಾಧ್ಯಕ್ಷ ಡಾ. ಸಂಜೀವ
ರೈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕುಷ್ಮಾ ಸಮಿತಿಯ ಅಧ್ಯಕ್ಷ ಯುವರಾಜ್ ಜೈನ್ ಮತ್ತು ಕಾರ್ಯದರ್ಶಿ ಡಾ. ಮಂಜುನಾಥ್
ಎಸ್. ರೇವಣಕರ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

![](https://hosakannada.com/wp-content/uploads/2026/10/IMG_20261012_182031-668x1024.
jpg)

ಸಮಿತಿಯ ಜೊತೆ ಕಾರ್ಯದರ್ಶಿಗಳಾದ ಸವಣೂರಿನ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಸಿಇಒ ಅಶ್ವಿನ್ ಶೆಟ್ಟಿ,
ಬೆಳ್ತಂಗಡಿಯ ಎಕ್ಸ್‌ಲೆಲ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಸಮಿತಿಯ ಉಪಾಧ್ಯಕ್ಷರುಗಳಾಗಿ
ಅಲ್ ಬದ್ರಿಯಾ ಎಜುಕೇಶನಲ್ ಅಸೋಸಿಯೇಶನ್, ಕೃಷ್ಣಪುರ, ಸುರತ್ಕಲ್, ಮಂಗಳೂರಿನ ಸಂಚಾಲಕ ಬಿ. ಎ. ನಝೀರ್,
ಮೂಡಬಿದಿರೆಯ ನ್ಯೂ ವೈಬ್ರೆಂಟ್ ಕಲ್ಲಬೆಟ್ಟು ಟ್ರಸ್ಟಿ ಚಂದ್ರಶೇಖರ ರಾಜೇ ಅರಸ್ ಹೆಚ್.ಆರ್., ಪುತ್ತೂರಿನ
ವಿವೇಕಾನಂದ ಪದವಿಪೂರ್ವ ಕಾಲೇಜು ಅಧ್ಯಕ್ಷ ರವೀಂದ್ರ ಪಿ., ಉಜಿರೆಯ ಎಸ್‌ಡಿಎಂ ಸಮೂಹ ಶಿಕ್ಷಣ ಸಂಸ್ಥೆಗಳ,
ಕಾರ್ಯನಿರ್ವಹಣಾಧಿಕಾರಿ ಪೂರನ್ ವರ್ಮ ಹಾಗೂ ಶ್ರೀ ಕುಮಾರಸ್ವಾಮಿ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯದ
ಅಧ್ಯಕ್ಷ ಗಣೇಶ್ ಪ್ರಸಾದ್ , ಸಲಹೆಗಾರ ಹಾಗು ಖಜಾಂಚಿ ಶಕ್ತಿ ಸಮೂಹ ಶಿಕ್ಷಣ ಸಂಸ್ಥೆ, ಶಕ್ತಿನಗರ, 
ಮಂಗಳೂರಿನ ರಮೇಶ್ ಕೆ. ಸಮಿತಿಯ. ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ
ಸಂಘದ ವತಿಯಿಂದ ಎಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕುಪ್ಪಾ
ಸಮಿತಿಯ ಸದಸ್ಯ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಪೂರನ್ ವರ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
