# Tomato : ಟಮೋಟೊ ದರ ದಿಢೀರ್ ಏರಿಕೆ – ಕೆಜಿ ಅಲ್ಲ, ಒಂದು ಹಣ್ಣಿಗೆ 75 ರೂ!!

- Link: https://hosakannada.com/news/tomato-price-has-suddenly-increased-not-per-kg-but-rs-75-per-fruit/
- Published: 2025-10-29T09:41:21+00:00
- Author: ಹೊಸಕನ್ನಡ ನ್ಯೂಸ್

Tomato: ಕೆಂಪು ರಾಣಿ ಟಮೊಟೊದರ ಇದೀಗ ದಿಢೀರ್ ಏರಿಕೆ ಕಂಡಿದೆ. ಒಂದು ಕೆಜಿಗೆ ಬರೋಬ್ಬರಿ 600 ಏರಿಕೆ
ಕಂಡಿದ್ದು, ಗ್ರಾಹಕರಿಗೆ ಕೈ ದೊಡ್ಡ ಅಘಾತ ನೀಡಿದೆ. ಹಾಗಂತ ಇದು ನಮ್ಮ ದೇಶದಲ್ಲಿ ಏರಿಕೆಯಾದದ್ದಲ್ಲ.
ಬದಲಿಗೆ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ, ಹಣದುಬ್ಬರದ ಕಾರಣ ಈ ರೀತಿ ಟಮೋಟೋ ದರ ಏರಿಕೆ ಆಗಿದೆ.

Sponsored

ಹೌದು, ಪಾಕಿಸ್ತಾನದಲ್ಲಿ ಜನಜೀವನ ದುಬಾರಿ ಆಗಿದ್ದು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಅಗತ್ಯ
ವಸ್ತುಗಳ ಬೆಲೆಗಳು ಅತಿಯಾದ ಮಟ್ಟಕ್ಕೆ ಏರಿಕೆಯಾಗಿವೆ. ದಿನನಿತ್ಯ ಬೇಕಾಗುವ ವಸ್ತುಗಳನ್ನು ಗ್ರಾಹಕರು
ಕೊಳ್ಳದಂತಹ ಸ್ಥಿತಿ ತಲುಪಿದೆ. ಅಂತೆಯೇ ಟೊಮೆಟೊ ಬೆಲೆ ಕಿಲೋಗೆ ₹600 ತಲುಪಿರುವುದು ಈಗ ಪಾಕಿಸ್ತಾನದಲ್ಲಿನ
ದೊಡ್ಡ ಸುದ್ದಿಯಾಗಿದೆ.

Advertisement

Advertisement

ಟೊಮೆಟೊ ಬೆಲೆ ಏಕೆ ಇಷ್ಟು ಏರಿತು?
 ಅಕ್ಟೋಬರ್ 11ರಂದು ಅಫ್ಘಾನಿಸ್ತಾನದೊಂದಿಗೆ ಉಂಟಾದ ಗಡಿ ಸಂಘರ್ಷದ
ನಂತರ, 2,600 ಕಿಮೀ ಉದ್ದದ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಈ ಗಡಿ ಪಾಕಿಸ್ತಾನದ ಪ್ರಮುಖ
ತರಕಾರಿ ಸರಬರಾಜು ಮಾರ್ಗವಾಗಿತ್ತು. ಈಗ ಆಮದು ಸಂಪೂರ್ಣ ಸ್ಥಗಿತಗೊಂಡಿದೆ. ಅದರ ಪರಿಣಾಮವಾಗಿ ಟೊಮೆಟೊ
ಸೇರಿದಂತೆ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರಿದೆ.

Advertisement
