# RCB Marketing Head:ಆರ್‌ಸಿಬಿ ಮಾರ್ಕೆಟಿಂಗ್‌ ಹೆಡ್‌ ನಿಖಿಲ್‌ ಸೋಸಲೆ ಸೇರಿ ಮೂವರ ಅರೆಸ್ಟ್‌: ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ ಪೋಸ್ಟ್‌ ಏನು?

- Link: https://hosakannada.com/news/three-people-including-rcb-marketing-head-nikhil-sosale-arrested-what-was-the-post-on-social-media/
- Published: 2025-06-06T08:54:39+00:00
- Author: ಹೊಸಕನ್ನಡ ನ್ಯೂಸ್

RCB Marketing Head: ಆರ್‌ಸಿಬಿ ಮಾರ್ಕೆಟಿಂಗ್‌ ಹೆಡ್‌ ನಿಖಿಲ್‌ ಸೋಸಲೆ ಸೇರಿ ಮೂವರನ್ನು ಪೊಲೀಸರು
ಅರೆಸ್ಟ್‌ ಮಾಡಿದ್ದಾರೆ. ನಿಖಿಲ್‌ ಸೋಸಲೆ ಪೊಲೀಸರ ಅನುಮತಿ ಪಡೆಯದೇ ವಿಕ್ಟರಿ ಪೆರೇಡ್‌ ಎಂದು ಪೋಸ್ಟ್‌
ಹಾಕಿದ್ದು, ಅರೆಸ್ಟ್‌ ಮಡಲಾಗಿದೆ. ಡಿಎನ್‌ಎ ಸಂಸ್ಥೆಯ ಇಬ್ಬರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದರೆ.
ಡಿಎನ್‌ಎ ಸಂಸ್ಥೆಯ ಕಿರಣ್‌ ಮತ್ತು ಸುಮಂತ್‌ ಬಂಧನವಾಗಿದೆ.

Sponsored

ನಿಖಿಲ್‌ ಸೋಸಲೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ನ ಮಾರ್ಕೆಟಿಂಗ್‌ ಹೆಡ್‌ ಆಗಿದ್ದ. ಈತ ಸೋಷಿಯಲ್‌ ಮೀಡಿಯಾದಲ್ಲಿ
ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್‌ ಅಂತ ಪೋಸ್ಟ್‌ ಮಾಡಿದ್ದ. ಪೊಲೀಸರ ಅನುಮತಿ ಪಡೆಯದೇ
ಪೇಜ್‌ನಲ್ಲಿ ಪರೇಡ್‌ ಬಗ್ಗೆ ಪೋಸ್ಟ್‌ ಮಾಡಿದ್ದು, ಆದರೆ ಪರೇಡ್‌ ಕುರಿತು ಕಮಿಷನರ್‌ ನಿರಾಕರಿಸಿದ
ನಂತರವೂ ಈತ ಪೋಸ್ಟ್‌ ಡಿಲೀಟ್‌ ಮಾಡಿರಲಿಲ್ಲ.

Advertisement

Advertisement

ಅಲ್ಲದೇ ಸ್ಟೇಡಿಯಂನಲ್ಲಿ ಸೆಲೆಬ್ರೆಷನ್‌ಗೆ ಉಚಿತ ಟಿಕೆಟ್‌ ಎಂದು ಘೋಷಿಸಲಾಗಿತ್ತು. ಗೇಟ್‌ 9 ಮತ್ತು
10 ರ ಬಳಿ 1 ಗಂಟೆಗೆ ಟಿಕೆಟ್‌ ಸಿಗುತ್ತೆ ಎಂದು ಹೇಳಿದ್ದರು. ಮಧ್ಯಾಹ್ನ 3 ಗಂಟೆಗೆ ಸ್ಟೇಡಿಯಂಗೆ 
ಅಭಿಮಾನಿಗಳಿಗೆ ಉಚಿತ ಪ್ರವೇಶ ಅಂತ ಪೋಸ್ಟ್‌ ಹಾಕಲಾಗಿದೆ. ನಿಖಿಲ್‌ ಸೂಚನೆಯಂತೆ ಡಿಎನ್‌ಎ ಮ್ಯಾನೇಜ್ಮೆಂಟ್‌
ಕಂಪನಿ ಮಾಡಿದೆ. ಈ ಪೋಸ್ಟ್‌ ಹಾಕಿದ್ದಕ್ಕೆ ಲಕ್ಷಾಂತರ ಮಂದಿ ಸೇರೋದಕ್ಕೆ ಕಾರಣವಾಗಿದೆ.

Advertisement
