# ಮೂಡುಬಿದಿರೆ: ನಾಪತ್ತೆಗೊಂಡ ಯುವತಿ ಲಕ್ನೋದಲ್ಲಿ ಪತ್ತೆ

- Link: https://hosakannada.com/news/three-days-missing-young-woman-found-in-lucknow/
- Published: 2026-10-12T09:17:59+00:00
- Author: ಹೊಸಕನ್ನಡ ನ್ಯೂಸ್

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆಯ ರಮ್ಯಾ ಎಂಬಾಕೆ ಫ್ರೀ ಫೈರ್‌ ಆಟದ ಮೂಲದ ಪರಿಚಯಗೊಂಡ
ಉತ್ತರ ಪ್ರದೇಶದ ಅಮನ್‌ ವರ್ಮಾನನ್ನು ಪ್ರೀತಿಸುತ್ತಿದ್ದು, ಆತನನ್ನು ಭೇಟಿಯಾಗಲು ಲಕ್ನೋಗೆ ಹೋಗಿದ್ದು
ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

Sponsored

ಕಳೆದೊಂದು ವರ್ಷದಿಂದ ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿಕೊಂಡಿದ್ದ ಇವರಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತ್ತು.
ರಮ್ಯಾ ಆ.29 ರಂದು ರಮ್ಯಾ ನಾಪತ್ತೆಗೊಂಡ ಕುರಿತು ಮೂಡಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಮಾಡಿದ ಪೊಲೀಸರು ರಮ್ಯಾ ಲಕ್ನೋದಲ್ಲಿರುವುದನ್ನು ಪತ್ತೆ ಹಚ್ಚಿದ್ದು, ಸ್ವಇಚ್ಛೆಯಿಂದ ಬಂದಿದ್ದು,
ಅಮನ್‌ ವರ್ಮಾನನ್ನು ಮದುವೆಯಾಗಲು ನಿರ್ಧರಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

Advertisement

Advertisement

Advertisement
