# HD Kumaraswamy: ಕುಮಾರಸ್ವಾಮಿಯಿಂದ ಕೋಟ್ಯಾಂತರ ರೂ ಸಾಲಗಾರನಾಗಿ, ಇಂದಿಗೂ ಬಡ್ಡಿ ಕಟ್ಟುತ್ತಿದ್ದಾರೆ ಈ ಪ್ರಬಲ ಸಂಸದ !!

- Link: https://hosakannada.com/news/this-mp-is-still-paying-interest-as-a-borrower-from-kumaraswamy-latest-news/
- Published: 2023-12-20T10:59:00+00:00
- Author: ಕಾವ್ಯ ವಾಣಿ

HD Kumaraswamy: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯಿಂದ (Former CM HD Kumaraswamy) ನಾನು
ಸಾಲಗಾರನಾಗಿದ್ದು ಅಲ್ಲದೇ, ಇಂದಿಗೂ ಆ ಸಾಲಕ್ಕೆ (Loan) ಬಡ್ಡಿ ಕಟ್ಟುತ್ತಿದ್ದೇನೆ ಎಂದು ಮಂಡ್ಯ 
ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ (Former MP Shivaramegowda) ಗಂಭೀರ ಆರೋಪ ಮಾಡಿದ್ದಾರೆ.

Sponsored

ಹೌದು, ಮಂಡ್ಯ ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ ಅವರು ನಾಗಮಂಗಲದಲ್ಲಿ ಮಾತನಾಡಿ, ನನ್ನನ್ನು ಸಾಲಗಾರನ್ನಾಗಿಸಿದ್ದು
ಮಾಜಿ ಸಿಎಂ ಕುಮಾರಸ್ವಾಮಿ ಎಂದು ಆರೋಪಿಸಿದರು. ಆರು ತಿಂಗಳು ಸಂಸದನಾಗಿ ಮಾಡಿ ಮುಂದಿನ ಚುನಾವಣೆಗೆ
ಟಿಕೆಟ್ ಕೊಡಲಿಲ್ಲ. ಆ ಬಳಿಕ ನಡೆದ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸಾಲಗಾರನಾಗಿದ್ದೇನೆ.

Advertisement

Advertisement

ಶಿವರಾಮೇಗೌಡರು ಬೆಂಗಳೂರಿನ ಎಂಜಿ ರಸ್ತೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ 12.48 ಕೋಟಿ ರೂಪಾಯಿ
ಲೋನ್ ಪಡೆದುಕೊಂಡಿದ್ದಾರೆ. ಆದರೆ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚನೆ ಆರೋಪದಡಿ ಮಾಜಿ ಸಂಸದ
ಎಲ್​ಆರ್ ಶಿವರಾಮೇಗೌಡರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದು, 
ಸಾಲದ ಹಣ ಬೇರೆಡೆ ವರ್ಗಾಯಿಸಿ ಅನ್ಯ ಉದ್ದೇಶ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಎಲ್​ಆರ್
ಶಿವರಾಮೇಗೌಡ ಸೇರಿ ಏಳು ಮಂದಿ ವಿರುದ್ಧ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸಲ್ಲಿಸಿದ ದೂರಿನ
ಅನ್ವಯ ಸಿಬಿಐ ಎಫ್​ಐಆರ್ ದಾಖಲಿಸಿಕೊಂಡಿದೆ. ಜೊತೆಗೆ ಶಿವರಾಮೇಗೌಡ, ಪತ್ನಿ ಸುಧಾ, ಮಗ ಚೇತನ್ ಗೌಡ,
ಶಿವರಾಮೇಗೌಡ ಸೊಸೆ ಹಾಗೂ ರಾಯಲ್ ಕಂಕರ್ಡ್ ಎಜುಕೇಷನಲ್ ಟ್ರಸ್ಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

**ಇದನ್ನು ಓದಿ: [Road accident: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು! ಸ್ಥಳದಲ್ಲಿ ಮೃತಪಟ್ಟ ಚಾಲಕ](https://hosakannada.com/2023/12/20/dakshina-kannada-death-news-man-died-on-the-spot-after-a-car-rammed-into-a-parked-lorry-in-bangalore/)**

Advertisement
