# ಹಾಡಹಗಲೇ ಬುರ್ಖಾಧಾರಿಗಳಿಂದ ಮೆಡಿಕಲ್ ಶಾಪಿನಲ್ಲಿ ಕೈ ಚಳಕ

- Link: https://hosakannada.com/news/theft-at-medical-store/
- Published: 2022-08-19T15:40:49+00:00
- Author: ಕೆ. ಎಸ್. ರೂಪಾ

ಹಾಡಹಗಲೇ ಮೆಡಿಕಲ್ ಶಾಪ್‍ಗೆ ಬುರ್ಖಾ ಧರಿಸಿ ಬಂದ ಮೂವರು ಯುವತಿಯರು ತಮ್ಮ ಕೈ ಚಳಕ ತೋರಿಸಿದ ಘಟನೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

Sponsored

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಟ್ಟಿಗೆ ಡಿಪೋ ಸಮೀಪದ ಅಪೋಲೋ ಮೆಡಿಕಲ್‍ನಲ್ಲಿ ಕಳ್ಳಿಯರು ತಮ್ಮ
ಕೈಚಳಕ ತೋರಿಸಿದ್ದಾರೆ. ಆಗಸ್ಟ್ 3 ರಂದು ನಡೆದಿದ್ದ ಆದರೂ ಈ ಘಟನೆ ತಡವಾಗಿ ಬೆಳಕಿಗೆಬಂದಿದೆ. ಮಧ್ಯಾಹ್ನ
2 ಗಂಟೆ ವೇಳೆಗೆ ಔಷಧ ಖರೀದಿ ನೆಪದಲ್ಲಿ ಮೆಡಿಕಲ್‍ಗೆ ಆಗಮಿಸಿದ್ದ ಮಹಿಳೆಯರು ಮೆಡಿಕಲ್ ಸಿಬ್ಬಂದಿ 
ಕಣ್ತಪ್ಪಿಸಿ ಶಾಪ್‍ನಿಂದ ಕೆಲ ವಸ್ತುಗಳನ್ನು ಕದ್ದು ಬುರ್ಖಾದಲ್ಲಿರಿಸಿಕೊಂಡು ಪರಾರಿಯಾಗಿದ್ದಾರೆ.

ಮಹಿಳೆಯರು ಕಳ್ಳತನ ಮಾಡಿರುವ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,
ಸಿಬ್ಬಂದಿ ಸಿಸಿಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ವೀಡಿಯೋ
ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.ಅದೇನೇ ಇರಲಿ ತಪ್ಪು ಮಾಡಿ ಮೂರನೇ ಕಣ್ಣಿಗೆ ಬಿದ್ದು
ಘಟನೆ ಬಯಲಾಗಿದೆ.

Advertisement

Advertisement

Advertisement
