# Shiradi Ghat: ಶಿರಾಡಿಘಾಟ್‌ನಲ್ಲಿ ರಸ್ತೆಗೆ ಬಿದ್ದಿದ್ದ ಮಣ್ಣಿನ ತೆರವು ಕಾರ್ಯ ಪೂರ್ಣ- ಏಕಮುಖ ಸಂಚಾರಕ್ಕೆ ಅವಕಾಶ

- Link: https://hosakannada.com/news/the-work-of-clearing-the-mud-that-had-fallen-on-the-road-at-shiradi-ghat-is-complete-one-way-traffic-is-allowed/
- Published: 2025-06-26T11:14:52+00:00
- Author: ಹೊಸಕನ್ನಡ ನ್ಯೂಸ್

Shiradi Ghat: ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ಜೂನ್
25ರ ಮಧ್ಯರಾತ್ರಿ ಸಂಭವಿಸಿದ ಗುಡ್ಡಕುಸಿತದಲ್ಲಿ ಮಣ್ಣು ತೆರವು ಕಾರ್ಯ ಪೂರ್ಣಗೊಳಿಸಲಾಗಿದೆ. ಇದೀಗ
ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಮಧ್ಯರಾತ್ರಿ
1 ಗಂಟೆಯಿಂದ ವಾಹನ ಸಂಚಾರ ಬಂದ್ ಆಗಿ ಸಾವಿರಾರು ಮಂದಿ ರಸ್ತೆಯಲ್ಲಿ ಸಿಲುಕಿಕೊಂಡಿದ್ದರು. ವಾಹನ ಸಂಚಾರ
ಬಂದ್ ಆದ ಬಳಿಕ ಹಾಸನ ಜಿಲ್ಲಾಧಿಕಾರಿ ಲತಾ ಬದಲಿ ಮಾರ್ಗವನ್ನು ಸೂಚಿಸಿದ್ದರು.

Sponsored

[ಇದನ್ನೂ ಓದಿ:Crime: ಮುರುಡೇಶ್ವರ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಪೊಲೀಸ್ ರೈಡ್ ಮೂವರು ಅರೆಸ್ಟ್!](https://hosakannada.com/2025/06/26/murudeshwar-prostitution-at-lodge-police-raid-three-arrested/)

Advertisement

Advertisement

Advertisement
