# TCS: ಪಕ್ಕದಲ್ಲಿ ಬಂದು ಕೂರ್ತಿದ್ದ ದ್ದ, ಸೀದಾ ಅಲ್ಲಿಗೆ ಕೈ ಹಾಕುತ್ತಿದ್ದ – TCS ಕಂಪನಿಯಲ್ಲಿ ನಡೆದ ಕರಾಳತೆ ತೆರೆದಿಟ್ಟ ಮಹಿಳಾ ಟೆಕ್ಕಿ

- Link: https://hosakannada.com/news/the-woman-techie-who-came-and-sat-next-to-me-directly-reaching-out-exposed-the-darkness-that-took-place-in-tcs-company/
- Published: 2026-04-21T12:44:02+00:00
- Author: ಹೊಸಕನ್ನಡ ನ್ಯೂಸ್

TCS: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ದೈತ್ಯ ಟೆಕ್​ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (
TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿ ಬಲವಂತದ ಧಾರ್ಮಿಕ ಮತಾಂತರಕ್ಕೆ
ಒತ್ತಾಯಿಸಿದ ಪ್ರಕರಣ ಬೆಳಕಿಗೆ ಬಂದಿದ್ದು ದೇಶದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಕುರಿತು
ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದು ತನಿಖೆಯನ್ನು ಇನ್ನು ಚುರುಕುಗೊಳಿಸಿದ್ದಾರೆ. ಕಂಪನಿಯಲ್ಲಿ
ನಡೆದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

Sponsored

ಹೌದು, ‘ನಾಶಿಕ್ ಟಿಸಿಎಸ್​ ಸಂಸ್ಥೆ ಸೇರಿಕೊಂಡ ಕೆಲವೇ ದಿನಗಳಲ್ಲಿ ನನ್ನ ಸಹೋದ್ಯೋಗಿಗಳು ಚುಡಾಯಿಸಲು
ಶುರು ಮಾಡಿದರು. ‘ಒಳ್ಳೆಯ ಆಟಗಾರ್ತಿ, ಜೀರೋ ಫಿಗರ್’ ಎಂದು ಕರೆಯುತ್ತಿದ್ದರು. ಮತ್ತೊಂದೆಡೆ, ನಮ್ಮ
ಹಿಂದು ದೇವತೆಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಇಲ್ಲಿನ ಕೆಟ್ಟ ಪರಿಸ್ಥಿತಿ ಅನುಭವಿಸಿರುವ
ಮಹಿಳೆಯರ ಪೈಕಿ ನಾನೂ ಕೂಡ ಒಬ್ಬಳು ಎಂದು ಟೆಕ್ಕಿಯೊಬ್ಬರು ತಮ್ಮ ಟ್ರೇನಿಂಗ್ ಮುಗಿದು ಡ್ಯೂಟಿಗೆ ಜಾಯಿನ್​
ಆದ ಬಳಿಕ ನಡೆದ ಘಟನೆಯ ಕರಾಳತೆಯನ್ನು ನೆನೆದು ಭಾವುಕರಾಗಿದ್ದಾರೆ.

Advertisement

Advertisement

ಪೊಲೀಸರಿಗೆ ಕಚೇರಿಯೊಳಗಿನ ಕರಾಳತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ಅಲ್ಲದೆ ನಾನು ಕೆಲಸ ಮಾಡುತ್ತಿದ್ದ ಜಾಗಕ್ಕೆ ಮತ್ತೊಬ್ಬ ಟೀಮ್​ನ ಆಸೀಫ್​ ಅನ್ಸಾರಿ, ನನ್ನ ಬಳಿಗೆ 
ಪದೇ ಪದೇ ಬರುತ್ತಿದ್ದ. ಖುರ್ಚಿಯೇ ಇಲ್ಲದಿದ್ದರೂ, ನನ್ನ ಪಕ್ಕದಲ್ಲಿ ಬಂದು ಅಂಟಿಕೊಂಡು ಕೂರುತ್ತಿದ್ದ.
ಇಷ್ಟಕ್ಕೆ ಸುಮ್ಮನಾಗದ ಆತ, ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಉದ್ದೇಶಪೂರ್ವಕವಾಗಿ ಅವನು ನನ್ನ ದೇಹವನ್ನು
ಮುಟ್ಟಲು ಪ್ರಯತ್ನಿಸುತ್ತಿದ್ದ. ನನ್ನ ಕೈಯನ್ನು ಎಳೆಯುತ್ತಿದ್ದ. ಕೆಲವೊಮ್ಮೆ ತೊಡೆ ಅಥವಾ ಭುಜದ ಮೇಲೆ
ತನ್ನ ಕೈಯಿಡುತ್ತಿದ್ದನ್ನು. ಒಮ್ಮೆ, ಅವನು ನನ್ನ ಹತ್ತಿರ ಬಂದು, ನನ್ನ ಹೊಟ್ಟೆ ಮತ್ತು ಸೊಂಟವನ್ನು
ಸ್ಪರ್ಶಿಸಿದ್ದ. ನಿನ್ನದು ಜೀರೋ ಫಿಗರ್​ ಎನ್ನುತ್ತಿದ್ದ. ಇನ್ನೊಂದು ಸಂದರ್ಭದಲ್ಲಿ, ನಾನು ಗ್ಯಾಲರಿಯಲ್ಲಿ
ನಿಂತಿದ್ದಾಗ, ಹಿಂಬದಿಯಿಂದ ಬಂದ ಆಸೀಫ್​, ಏಕಾಏಕಿ ನನ್ನನ್ನು ಬಿಗಿಯಾಗಿ ಅಪ್ಪಿಕೊಂಡ. ಕೂಡಲೇ ಆತನನ್ನು
ಬಲವಂತವಾಗಿ ದೂರ ತಳ್ಳಿ ಸ್ಥಳದಿಂದ ಓಡಿಹೋದೆ” ಎಂದು ಹೇಳಿಕೊಂಡಿದ್ದಾರೆ.

Advertisement
