# ಉಜಿರೆ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ತಿಂಗಳ ತಿರುಳು “ಕರ್ಣಾಂತರಂಗ” ಯಕ್ಷಗಾನ ಪ್ರಾತ್ಯಕ್ಷತೆ

- Link: https://hosakannada.com/news/the-highlight-of-the-month-from-the-ujire-sdm-yakshagana-kala-kendra-is-the-karnantaranga-yakshagana-demonstration/
- Published: 2026-07-22T21:40:37+00:00
- Author: ಹೊಸಕನ್ನಡ ನ್ಯೂಸ್

ಉಜಿರೆ: ಇಂದು, ಜುಲೈ 22 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ
ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಪ್ರಸ್ತುತಪಡಿಸುವ ತಿಂಗಳ ತಿರುಳು ಕಾರ್ಯಕ್ರಮವಾದ “ಕರ್ಣಾಂತರಂಗ”
ಯಕ್ಷಗಾನ ಪ್ರಾತ್ಯಕ್ಷತೆ ವೈಭವದಿಂದ ನಡೆಯಿತು.

Sponsored

ಕಾರ್ಯಕ್ರಮದ ಅಧ್ಯಕ್ಷರಾದ-ಡಾ. ನಾಗಣ್ಣ ಡಿ.ಎ ( ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರು, ಎಸ್.ಡಿ.ಎಂ (
ಸ್ವಾಯತ್ತ) ಕಾಲೇಜು ಉಜಿರೆ),ಮುಖ್ಯ ಅತಿಥಿಗಳಾಗಿ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ (ಪ್ರಸಿದ್ಧ 
ಯಕ್ಷಗಾನ ಅರ್ಥಧಾರಿಗಳು ಮತ್ತು ಕಲಾವಿದರು), ವಿ.ಕೆ ಕಡಬ (ಮುಖ್ಯಸ್ಥರು, ರೇಡಿಯೋ ನಿನಾದ) ತೃಪ್ತ 
ಕುಮಾರ್ ಜೈನ್ ( ಮುಖ್ಯಸ್ಥರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ ), ಅರುಣ್ ಕುಮಾರ್ ಧರ್ಮಸ್ಥಳ ( ಯಕ್ಷಗಾನ
ತರಬೇತುದಾರರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ), ಪುನೀತ್ (ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ), 
ಉಜಿರೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು) ಅರವಿಂದ್ (ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ), ಉಜಿರೆ)
ಶ್ರೇಯಸ್ ಪಾಳಂದೆ ( ಸಂಸ್ಕೃತ ಉಪನ್ಯಾಸಕರು, ಎಸ್.ಡಿ.ಎಂ( ಸ್ವಾಯತ್ತ )ಕಾಲೇಜು ಉಜಿರೆ) ಮುಖೇಶ್ ದೇವಾಧರ್(
ಹಿರಿಯ ವಿಧ್ಯಾರ್ಥಿ, ಪ್ರಸಿದ್ಧ ಬಣ್ಣದ ವೇಷಧಾರಿ) ಮುಂತಾದ ಗಣ್ಯರು ಉಪಸ್ಥಿತರಿದ್ದರು.

Advertisement

Advertisement

ಈ ಸಂಭ್ರಮದ ಸಮಯದಲ್ಲಿ “ಕರ್ಣಾಂತರಂಗ” ಯಕ್ಷಗಾನ ಪ್ರಾತ್ಯಕ್ಷತೆ ಪ್ರಸ್ತುತ ಪಡಿಸಲಾಯಿತು. ಪಾತ್ರ 
ಪರಿಚಯ – ಕರ್ಣ: ದಿನೇಶ್ ಶೆಟ್ಟಿ ಕಾವಳಕಟ್ಟೆ , ಕುಂತಿ : ದೀಕ್ಷಾ, ಶ್ರೀಕೃಷ್ಣ: ತೇಜಸ್ ಪಾತ್ರ ವಹಿಸಿದ್ದರು.
ವಿಧ್ಯಾರ್ಥಿ ಸಂಯೋಜಕರಾಗಿ ಸಹನ, ತೇಜಸ್ ಕಾರ್ಯಕ್ರಮ ನಿರ್ವಹಿಸಿದರು. ಸಾಕ್ಷ, ಯಶ್ಮಿತಾ, ಹರ್ಷಿಣಿ,
ಸ್ಮೃತಿ ಪ್ರಾರ್ಥಿಸಿದರೆ, ಅನನ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಯಜ್ಞ ಅವರು ಸ್ವಾಗತಿಸಿ, ಧನ್ಯವಾದ
ಕಾರ್ಯಕ್ರಮವನ್ನು ಅಪೂರ್ವ ಅವರು ನೆರವೇರಿಸಿದರು.

![](https://hosakannada.com/wp-content/uploads/2026/07/IMG-20260722-WA0073-1024x576.
jpg)

Advertisement
