# Bangalore Airport: ಏರ್ಪೋರ್ಟ್‌ ಟಿ2ಗೆ ದೇಶದ ಮೊದಲ 5ಸ್ಟಾರ್‌ ಗಿರಿ!

- Link: https://hosakannada.com/news/the-countrys-first-5-star-hotel-for-airport-t2/
- Published: 2025-04-10T08:44:53+00:00
- Author: ಹೊಸಕನ್ನಡ ನ್ಯೂಸ್

Bangalore Airport: ದೇಶದ ಮೂರನೇ ಅತಿ ಜನನಿಬಿಡ ವಿಮಾನ ನಿಲ್ದಾಣವಾಗಿರುವ ಬೆಂಗಳೂರಿನ ಕೆಂಪೇಗೌಡ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಗರಿಯೊಂದು ಲಭಿಸಿದೆ. ಇಲ್ಲಿನ ಟರ್ಮಿನಲ್ 2 ಭಾರತದ ಮೊದಲ
5 ಸ್ಟಾರ್ ರೇಟಿಂಗ್ ಪಡೆದ ಟರ್ಮಿನಲ್‌ ಆಗಿ ಹೊರಹೊಮ್ಮಿದೆ. ನಾಗರಿಕ ವಿಮಾನ ಕ್ಷೇತ್ರದ ಮಹತ್ವದ ಏಜೆನ್ಸಿ
ಸೈಟ್ಯಾಕ್ಸ್‌ ಈ ರೇಟಿಂಗ್ ನೀಡಿದೆ.

Sponsored

ಟರ್ಮಿನಲ್ ವಿನ್ಯಾಸ, ಸ್ವಚ್ಛತೆ, ಭದ್ರತೆ, ಡಿಜಿಟಲ್ ಬಳಕೆ, ಅತಿಥ್ಯ, ಒಳಗೊಳ್ಳುವಿಕೆ ಮತ್ತು ಸುಸ್ಥಿರ
ಅಭಿವೃದ್ಧಿ ಸೇರಿ 30ಕ್ಕೂ ಹೆಚ್ಚು ವಿಭಾಗಗಳಲ್ಲಿ 800ಕ್ಕೂ ಹೆಚ್ಚು ಪ್ರಯಾಣಿಕರ ಅಭಿಪ್ರಾಯ ಮತ್ತು
ಅಧ್ಯಯನದ ಬಳಿಕ 5 ಸ್ಟಾರ್ ರೇಟಿಂಗ್ ನೀಡಲಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

Advertisement

Advertisement

ಈ ಬಗ್ಗೆ ಮಾತನಾಡಿದ ಬೆಂಗಳೂರು ವಿಮಾನ ನಿಲ್ದಾಣದ ಎಂಡಿ ಮತ್ತು ಸಿಇಓ ಹರಿ ಮರರ್, ಈ ಮೈಲುಗಲ್ಲು ಬೆಂಗಳೂರನ್ನು
ಜಾಗತಿಕ ವೈಮಾನಿಕ ಕ್ಷೇತ್ರದಲ್ಲಿ ಉತ್ತುಂಗದಲ್ಲಿ ಇಡಲಿದೆ. ನಮ್ಮ ಪ್ರಯಾಣಿಕರು, ಸಿಬ್ಬಂದಿ ಮತ್ತು
ಪಾಲುದಾರರಿಗೆ ಕೃತಜ್ಞತೆಗಳು ಎಂದು ಹೇಳಿದ್ದಾರೆ

Advertisement
