# 5G Smartphone: ಕೇವಲ 15,000 ರೂನಲ್ಲಿ ದಿ ಬೆಸ್ಟ್ ಸ್ಮಾರ್ಟ್ಫೋನ್ ಆಯ್ಕೆ ಯಾವುದು ಗೊತ್ತೇ? ಇಲ್ಲಿದೆ ಕಂಪ್ಲೀಟ್ ಆಯ್ಕೆ ವಿವರ

- Link: https://hosakannada.com/news/technology-news-top-5-smartphone-from-realme-poco-redmi-and-vivo-under-rupees-15000-in-india/
- Published: 2023-08-30T10:45:01+00:00
- Author: ಕಾವ್ಯ ವಾಣಿ

Smartphone: ಉತ್ತಮ ಕ್ಯಾಮೆರಾ (camera ), ಹೆಚ್ಚಿನ ಪ್ರೊಸೆಸರ್, ಫಾಸ್ಟ್ ಚಾರ್ಜಿಂಗ್ ಬ್ಯಾಟರಿಯಂತಹ
ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ, ನಿಮ್ಮ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ ಫೋನ್‌ (Smartphone)
+ಕೊಂಡುಕೊಳ್ಳುವ ಕನಸು ನನಸಾಗಲಿದೆ. ಹೌದು, ಹೊಸ 5G ಸ್ಮಾರ್ಟ್‌ ಫೋನ್‌ ಅನ್ನು ಕೇವಲ 15,000 ರೂಗಳೊಳಗೆ
ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ.

Sponsored

ಸದ್ಯ 5G ಸಪೋರ್ಟ್ ಮಾಡುವ Realme, POCO, Redmi, Tecno ಮತ್ತು Vivo ಕಂಪನಿಯ 5 ಅತ್ಯುತ್ತಮ 5G
ಸ್ಮಾರ್ಟ್ಫೋನ್ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಉತ್ತಮ ಆಯ್ಕೆ ಮಾತ್ರ ನಿಮ್ಮ ಕೈಯಲ್ಲಿದೆ.

Advertisement

Advertisement

**Motorola G62 5G:**
 ಕೇವಲ 14,999 ರೂಗಳಿಗೆ Motorola G62 5G ಫೋನ್ ಖರೀದಿಸಬಹುದು. ಇದರಲ್ಲಿ
ನಿಮಗೆ ಫೋನ್ 6.55 ಇಂಚಿನ IPS LCD FHD+ ಡಿಸ್ಪ್ಲೇ ಹೊಂದಿದೆ. ಫೋನ್ Qualcomm Snapdragon 695
5G ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋಟೋಗ್ರಾಫಿಗಾಗಿ ಹಿಂಭಾಗದಲ್ಲಿ 50MP + 8MP + 2MP ಕ್ಯಾಮೆರಾ
ಸೆಟಪ್ ಹೊಂದಿದ್ದು ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್ ಅನ್ನು ಪವರ್ ಮಾಡುವುದು
5000mAh ಬ್ಯಾಟರಿಯಾಗಿದ್ದು ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

**Realme 11x 5G:**
 ಇದೇ ತಿಂಗಳು ಬಿಡುಗಡೆ ಆಗಿರುವ ರಿಯಲ್ಮಿ ಕಂಪನಿಯ ಈ ಲೇಟೆಸ್ಟ್ 5G ಫೋನ್ 
6GB RAM ಮತ್ತು 128GB ಸ್ಟೋರೇಜ್ ಮಾದರಿಯೊಂದಿಗೆ ಕೇವಲ 14,999 ರೂಗಳಿಗೆ ಲಭ್ಯವಿದೆ. Realme 11X
5G ಫೋನ್ 120Hz ರಿಫ್ರೆಶ್ ದರದೊಂದಿಗೆ 6.72 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ MediaTek
Dimensity 6100+ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ಫೋನ್ ಉತ್ತಮ ಫೋಟೋಗಳನ್ನು
ಪಡೆಯಲು 64MP ಮತ್ತು 8MP ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ. ಇನ್ನು 5000mAh ಬ್ಯಾಟರಿಯೊಂದಿಗೆ
33W SuperVooc ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

**POCO M6 Pro 5G:**
 ಕೇವಲ 10,999 ರೂಗಳಲ್ಲಿ ಲಭ್ಯವಿರುವ Poco M6 Pro 5G ಫೋನ್ ಇದರ ಆರಂಭಿಕ
ವೇರಿಯಂಟ್ ಅಂದ್ರೆ 4GB RAM + 64GB ಸ್ಟೋರೇಜ್ ಆಗಿದೆ. ಇದು ಫೋನ್ Qualcomm Snapdragon 4 Gen
2 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. 6.79 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಇದು
90Hz ರಿಫ್ರೆಶ್ ದರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 50MP+ 2MP ಡ್ಯುಯಲ್ ಹಿಂಬದಿಯ ಕ್ಯಾಮೆರಾವನ್ನು
ಹೊಂದಿದೆ. ಇದಲ್ಲದೆ ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು 18W ಚಾರ್ಜಿಂಗ್ ಅನ್ನು ಸಪೋರ್ಟ್
ಮಾಡುತ್ತದೆ.

**Redmi 12 5G:**
 Redmi ಇತ್ತೀಚೆಗೆ ತನ್ನ ಅಗ್ಗದ 5G ಫೋನ್ ಆಗಿ Redmi 12 5G ಅನ್ನು ಬಿಡುಗಡೆ
ಮಾಡಿದೆ. ಈ ಫೋನ್ 3 ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಇದರ ಇದರ ಆರಂಭಿಕ ವೇರಿಯಂಟ್ ಅಂದ್ರೆ 4GB
RAM + 64GB ಸ್ಟೋರೇಜ್ ಕೇವಲ ₹14,985 ರೂಗಳಲ್ಲಿ ಲಭ್ಯವಿದೆ. Redmi 12 5G ಫೋನ್ ಮಾರುಕಟ್ಟೆಯಲ್ಲಿ
Qualcomm Snapdragon 4 Gen 2 ಚಿಪ್ಸೆಟ್ನಿಂದ ಚಾಲಿತವಾಗಿರುವ ಮೊದಲ ಫೋನ್ ಆಗಿದೆ. 6.79 ಇಂಚಿನ
FHD+ ಡಿಸ್ಪ್ಲೇಯನ್ನು ನೀಡುತ್ತದೆ. ಫೋನ್ 8GB ವರ್ಚುವಲ್ RAM ಅನ್ನು ಬೆಂಬಲಿಸುತ್ತದೆ. 50MP ಹಿಂಬದಿಯ
ಕ್ಯಾಮೆರಾ ಮತ್ತು 8MP ಸೆನ್ಸರ್ ಹೊಂದಿದೆ.

**Tecno Pova 5 Pro 5G:**
 TECNO Pova 5 Pro ವಿನ್ಯಾಸವು ಹೊಸ ನಥಿಂಗ್ ಫೋನ್ 2 ಅನ್ನು ಹೋಲುತ್ತದೆ.
ಈ ಫೋನ್ 6.78 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಕಂಪನಿಯು ಈ ಮೊಬೈಲ್ ಹಿಂಭಾಗದಲ್ಲಿ LED ಲೈಟ್
ಅನ್ನು ಸಹ ನೀಡಿದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. Mediatek Dimensity 6080 
ಪ್ರೊಸೆಸರ್ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ಫೋನ್ 50MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 
ಮುಂಭಾಗದಲ್ಲಿ 16MP ಸೆಲ್ಫಿ ಸಂವೇದಕವನ್ನು ಹೊಂದಿದೆ. ಫೋನ್ ಪವರ್ ಬ್ಯಾಕಪ್ ಒದಗಿಸಲು 5000mAh ಬ್ಯಾಟರಿಯೊಂದಿಗೆ
68W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ: [Flight: ವಿಮಾನದಲ್ಲಿ ಹೊಸ ಪ್ರಯೋಗ; ಪ್ರಾರಂಭವಾಗಲಿದೆ ‘ವಯಸ್ಕರಿಗೆ ಮಾತ್ರ’ ವಿಭಾಗ!! ಏನಿದೆ? ಏನಿರಲ್ಲ?](https://hosakannada.com/2023/08/30/international-news-airline-launches-only-adult-section-for-international-flight/)

Advertisement
