# ಸಹಾಯಕ ಪ್ರೊಫೆಸರ್ ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ | ಪಿಎಚ್‌ಡಿ ಕಡ್ಡಾಯ ಎಂಬ ಆದೇಶವನ್ನು ತಡೆಹಿಡಿದ ಯುಜಿಸಿ

- Link: https://hosakannada.com/news/teacher-and-news-about-phd/
- Published: 2021-10-14T12:39:28+00:00
- Author: ಹೊಸಕನ್ನಡ

ಸಹಾಯಕ ಪ್ರೊಫೆಸರ್ ಆಗ ಬಯಸುವವರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಪಿಎಚ್‌ಡಿ ಕಡ್ಡಾಯ ಎಂಬ ಆದೇಶವನ್ನು
ಆಯೋಗ ತಡೆಹಿಡಿದಿದ್ದು, ಇದರಿಂದ ಅದಷ್ಟು ಪ್ರೊಫೆಸರ್ ಹುದ್ದೆಗೆ ಸೇರಬಯಸುವವರಿಗೆ ನಿರಾಳವಾಗಿದೆ.

Sponsored

ಸಹಾಯಕ ಪ್ರೊಫೆಸರ್ ಹುದ್ದೆಗಳಿಗೆ ಪಿಎಚ್‌ಡಿ ಕಡ್ಡಾಯ. ಆದರೆ ಈ ಬಾರಿ ಈ ನಿಯಮದಿಂದ ಅನುದಾನ ಆಯೋಗ 
ಸಡಿಲಿಕೆ ನೀಡಿದೆ. ಕಡ್ಡಾಯವಾಗಿ ಪಿಎಚ್‌ಡಿ ಹೊಂದಿರಲೇಬೇಕು ಎಂದಿರುವ ತನ್ನ ಆದೇಶವನ್ನು ತಾತ್ಕಾಲಿಕವಾಗಿ
ತಡೆಹಿಡಿದಿರುವ ಆಯೋಗ ಕಡ್ಡಾಯವಾಗಿ ಪಿಎಚ್‌ಡಿ ಹೊಂದುವ ಅಗತ್ಯವಿಲ್ಲ ಎಂದು ಹೇಳಿದೆ.

Advertisement

Advertisement

ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲು ಪಿಎಚ್‌ಡಿಯನ್ನು ಕನಿಷ್ಠ
ಅರ್ಹತೆಯನ್ನಾಗಿ ಮಾಡುವ ಯೋಜನೆಯನ್ನು ಮುಂದುವರಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದ್ದರಿಂದ
ಈ ಆದೇಶ ಹೊರಡಸಲಾಗಿದೆ ಎಂದಿರುವ ಆಯೋಗ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಿಎಚ್‌ಡಿ
ಕಡ್ಡಾಯ ಎಂಬ ಆದೇಶವನ್ನು ಜುಲೈ 2023ರ ಜುಲೈ 1ರ ಮುಂದೂಡಿದೆ. ಇದರ ಅರ್ಥ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ
ಪಿಎಚ್‌ಡಿ ಕಡ್ಡಾಯವಲ್ಲ ಎಂಬ ಈ ಆದೇಶವು 2023ರ ಜುಲೈ 1ರವರೆಗೆ ಚಾಲ್ತಿಯಲ್ಲಿ ಇರುತ್ತದೆ.

2018 ರಲ್ಲಿ, ವಿಶ್ವವಿದ್ಯಾಲಯ ಅನುದಾನ ಆಯೋಗ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಪ್ರವೇಶ
ಮಟ್ಟದ ಹುದ್ದೆಗಳ ನೇಮಕಾತಿಗಳ ಮಾನದಂಡಗಳನ್ನು ನಿಗದಿ ಮಾಡಿತ್ತು. ಸಹಾಯಕ ಪ್ರಾಧ್ಯಾಪಕರಾಗಿ ಸೇವೆ 
ಸಲ್ಲಿಸುತ್ತಿರುವವರಿಗೆ ಮೂರು ವರ್ಷಗಳ ಗಡುವು ನೀಡಲಾಗಿತ್ತು. 2021-22ರ ಅವಧಿಗೆ ಇವರಿಗೆ ಬಡ್ತಿ 
ನೀಡುವ ಸಮಯದಲ್ಲಿ ಇದನ್ನು ಪರಿಗಣಿಸಬೇಕು ಎಂದ ಸೂಚಿಸಲಾಗಿತ್ತು. ಈ ಅವಧಿಯಲ್ಲಿ ಅವರು ಪಿಎಚ್‌ಡಿ ಮುಗಿಸಬೇಕು
ಎಂದು ಹೇಳಲಾಗಿತ್ತು. ಅದನ್ನೀಗ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಪಾಸಾದ ಸ್ನಾತಕೋತ್ತರ ಪದವೀಧರರು ಈ ಹುದ್ದೆಯಲ್ಲಿ ಸದ್ಯ
ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ.

Advertisement
