# ತಮಿಳುನಾಡು ವಿಧಾನಸಭಾ ಚುನಾವಣೆ, ಮುನ್ನಡೆ ಸಾಧಿಸಿದ ನಟ ವಿಜಯ್‌ ಟಿವಿಕೆ ಪಕ್ಷ

- Link: https://hosakannada.com/news/tamil-nadu-assembly-elections-actor-vijay-tvk-party-won-the-lead/
- Published: 2026-05-04T11:42:22+00:00
- Author: ಹೊಸಕನ್ನಡ ನ್ಯೂಸ್

ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ನಟ ಹಾಗೂ ತಮಿಳಗ ವೆಟ್ರಿ
ಕಳಗಂ (ಟಿವಿಕೆ) ಪಕ್ಷದ ನಾಯಕ ವಿಜಯ್‌ ಅವರ ಪಕ್ಷ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಭದ್ರತಾ 
ವ್ಯವಸ್ಥೆಯನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ವಿಜಯ್‌ ನಿವಾಸಕ್ಕೆ ಹೆಚ್ಚುವತಿ ಪೊಲೀಸ್‌ ಸಿಬ್ಬಂದಿಯನ್ನು
ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Sponsored

ವಿಜಯ್‌ ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಎಂಬ ಎರಡು ಪ್ರಮುಖ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದು,
ಟಿವಿಕೆ ಮೂಲಕ ರಾಜ್ಯದಾದ್ಯಂತ ಹಲವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

Advertisement

Advertisement

ರಾಜಧಾನಿ ಚೆನ್ನೈನಲ್ಲಿ ಒಟ್ಟು 16 ವಿಧಾನಸಭಾ ಕ್ಷೇತ್ರಗಳಿದ್ದು, ರಾಜ್ಯ ರಾಜಕೀಯದಲ್ಲಿ ಇವು ಪ್ರಮುಖ
ಪಾತ್ರ ವಹಿಸುತ್ತವೆ. ರಾಧಾಕೃಷ್ಣನ್ ನಗರ, ಪೆರಂಬೂರು, ಕೊಳತ್ತೂರು, ವಿಲ್ಲಿವಕ್ಕಂ, ತಿರು.ವಿ.ಕೆ.
ನಗರ, ಎಗ್ಮೋರ್, ರಾಯಪುರಂ, ಬಂದರು, ಚೆಪಾಕ್–ತಿರುವಲ್ಲಿಕೇಣಿ, ಅಣ್ಣಾ ನಗರ, ಸೈದಾಪೇಟ್, ಟಿ.ನಗರ,
ಮೈಲಾಪುರ್, ವೆಲಚೇರಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳು ಈ ಪಟ್ಟಿಯಲ್ಲಿ ಸೇರಿವೆ.

Advertisement
