# ಮುಂದಿನ ಐದು ದಿನ ದೇಶದ ಹಲವು ರಾಜ್ಯದಲ್ಲಿ ಉಷ್ಣ ಅಲೆ; ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ

- Link: https://hosakannada.com/news/summer/
- Published: 2022-03-28T10:37:01+00:00
- Author: ಹೊಸಕನ್ನಡ ನ್ಯೂಸ್

ಈಗಾಗಲೇ ಬೇಸಿಗೆ ಶುರುವಾಗಿದ್ದು, ಹಲವು ರಾಜ್ಯಗಳು ಪ್ರದೇಶಗಳಲ್ಲಿ ಬಿರುಬಿಸಿಲು ಶುರುವಾಗಿದೆ. ಇದರ
ಜೊತೆ
ಮುಂದಿನ ಐದು ದಿನಗಳವರೆಗೆ ದೇಶದ ಹಲವು ಭಾಗಗಳಲ್ಲಿ ಉಷ್ಣಅಲೆ ವಾತಾವರಣ ಇರಲಿದೆ ಎಂದು ಹವಾಮಾನ
ಇಲಾಖೆ ಮುನ್ಸೂಚನೆ ನೀಡಿದೆ.

Sponsored

ಈ ಬಾರಿ ಸರಾಸರಿ ತಾಪಮಾನಕ್ಕಿಂತ ಮೂರು ಪಟ್ಟು ಜಾಸ್ತಿ. 
ದೆಹಲಿಯಲ್ಲಿ ಮಾರ್ಚ್​ 28ರಂದು ಗರಿಷ್ಠ 
ತಾಪಮಾನ 39 ಡಿಗ್ರಿ ಸೆಲ್ಸಿಯಸ್​ಗೆ ತಲುಪಬಹುದು. ಶುಷ್ಕ ವಾತಾವರಣದ ನಡುವೆ, ಹಗಲಿನಲ್ಲಿ ಬಿಸಿಲಿನ
ತಾಪದಿಂದ ಉಷ್ಣತೆಯು ಹೆಚ್ಚಾಗುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಐಎಂಡಿ ಎಚ್ಚರಿಕೆ ನೀಡಿದೆ.

Advertisement

Advertisement

ಮಾರ್ಚ್​ 31ರವರೆಗೆ ಜಮ್ಮು-ಕಾಶ್ಮೀರ, ಉತ್ತರಾಖಂಡ್​, ರಾಜಸ್ಥಾನ, ಗುಜರಾತ್​, ಮಧ್ಯಪ್ರದೇಶ, ಹಿಮಾಚಲ
ಪ್ರದೇಶ, ಪಂಜಾಬ್​ ಮತ್ತು ಹರ್ಯಾಣದ ದಕ್ಷಿಣ ಭಾಗಗಳು ಸೇರಿ ಹಲವೆಡೆ ಉಷ್ಣ ಅಲೆ ಇರಲಿದ್ದು,ಸೌರಾಷ್ಟ್ರ-
ಕಚ್​ ಸೇರಿ ಇನ್ನೂ ಅನೇಕ ಪ್ರದೇಶಗಳಲ್ಲಿ ಮಾರ್ಚ್​ 31ರವರೆಗೂ ಉಷ್ಣ ಗಾಳಿ ಇರಲಿದೆ ಎಂದು ಐಎಂಡಿ (
IMD) ತಿಳಿಸಿದೆ.

Advertisement
