# ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣವಕಾಶ | ಸ್ಟಾಫ್ ಸೆಲೆಕ್ಷನ್ ಕಮಿಷನ್ ನಿಂದ 3261 ಹುದ್ದೆಗಳಿಗೆ ಅರ್ಜಿ ಆಹ್ವಾನ

- Link: https://hosakannada.com/news/staff-selection-commission-jobs/
- Published: 2021-09-26T11:35:55+00:00
- Author: ಹೊಸಕನ್ನಡ

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ) ಸೆಲೆಕ್ಷನ್‌ ಪೋಸ್ಟ್‌ (ಫೇಸ್-9) ಹುದ್ದೆಗಳ ನೇಮಕಾತಿಗೆ
ಅಧಿಸೂಚನೆ ಪ್ರಕಟಿಸಿದೆ. ಪಿಯುಸಿ, ಪದವಿ, ಸ್ನಾತಕ ಪದವಿ ಕೋರ್ಸ್‌ಗಳನ್ನು ಪಾಸ್‌ ಮಾಡಿದ ಅಭ್ಯರ್ಥಿಗಳಿಗೆ
ಉದ್ಯೋಗ ಅವಕಾಶಗಳಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Sponsored

ಎಸ್‌ಎಸ್‌ಸಿ ಒಟ್ಟು 3261 ಸೆಲೆಕ್ಷನ್‌ ಪೋಸ್ಟ್‌ಗಳಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು
ಕೇಂದ್ರ ಸರ್ಕಾರದ ಅಧೀನದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

Advertisement

Advertisement

**ಹುದ್ದೆಗಳ ವಿವರ**

**ಹುದ್ದೆಗಳ ಹೆಸರು**

*ಜೂನಿಯರ್ ಸೀಡ್ ಅನಾಲಿಸ್ಟ್‌
*ಗರ್ಲ್ಸ್‌ ಕೆಡೆಟ್‌ ಇನ್‌ಸ್ಟ್ರಕ್ಟರ್*ಮೆಕ್ಯಾನಿಕಲ್‌ ವಿಭಾಗ ಚಾರ್ಜ್‌ಮನ್*
ಸೈಂಟಿಫಿಕ್‌ ಅಸಿಸ್ಟಂಟ್*ಅಕೌಂಟಂಟ್‌*ಹೆಡ್‌ ಕ್ಲರ್ಕ್‌*ರಿಹ್ಯಾಬಿಲಿಟೇಶನ್‌ ಕೌನ್ಸೆಲರ್*ಸ್ಟಾಫ್‌
ಕಾರ್‌ ಡ್ರೈವರ್*ಟೆಕ್ನಿಕಲ್ ಸೂಪರಿಂಟೆಂಡಂಟ್‌*ಕಂಸರ್‌ವೇಶನ್‌ ಅಸಿಸ್ಟಂಟ್‌*ಟೆಕ್ನಿಕಲ್ ಅಸಿಸ್ಟಂಟ್*
ರಿಸರ್ಚ್‌ ಇನ್ವೆಸ್ಟಿಗೇಟರ್*ಜೂನಿಯರ್ ಕಂಪ್ಯೂಟರ್ ಆಪರೇಟರ್*ಸಬ್‌ ಎಡಿಟರ್ (ಹಿಂದಿ)*ಸಬ್‌ ಎಡಿಟರ್(
ಇಂಗ್ಲಿಷ್‌)*ಮಲ್ಟಿಟಾಸ್ಕಿಂಗ್ ಸ್ಟಾಫ್‌*ಸೀನಿಯರ್ ಸೈಂಟಿಫಿಕ್‌ ಅಸಿಸ್ಟಂಟ್‌ (ಬಯೋಲಜಿ)

ಹೀಗೆ ಇನ್ನೂ ಹಲವು ಪದನಾಮಕಗಳ ಹುದ್ದೆಗಳು ಸೇರಿ ಒಟ್ಟು 3261 ಸೆಲೆಕ್ಷನ್‌ ಪೋಸ್ಟ್‌ಗಳ ಭರ್ತಿಗೆ 
ಅರ್ಜಿ ಆಹ್ವಾನಿಸಲಾಗಿದೆ.

**ವಿದ್ಯಾರ್ಹತೆ** : ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ/ ತತ್ಸಮಾನ, ಪದವಿ, ಸ್ನಾತಕೋತ್ತರ ಪದವಿಯನ್ನು
ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪಾಸ್ ಮಾಡಿರಬೇಕು.

**ಪ್ರಮುಖ ದಿನಾಂಕಗಳು**

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ : [24-09-2021](https://hosakannada.com/news/staff-selection-commission-jobs/24092021)

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : [25-10-2021](https://hosakannada.com/news/staff-selection-commission-jobs/25102021)
ರ ರಾತ್ರಿ 11-30 ಗಂಟೆವರೆಗೆ

ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ : [28-10-2021](https://hosakannada.com/news/staff-selection-commission-jobs/28102021)
ರ ರಾತ್ರಿ 11-30 ಗಂಟೆವರೆಗೆ

ಆಫ್‌ಲೈನ್‌ ಚಲನ್‌ ಜೆನೆರೇಟ್‌ ಮಾಡಲು ಕೊನೆ ದಿನಾಂಕ : [28-10-2021](https://hosakannada.com/news/staff-selection-commission-jobs/28102021)
ರ ರಾತ್ರಿ 23-30 ಗಂಟೆವರೆಗೆ

ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ: [01-11-2021](https://hosakannada.com/news/staff-selection-commission-jobs/01112021)

ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಜನವರಿ / ಫೆಬ್ರುವರಿ 2022

ಅರ್ಜಿ ಸಲ್ಲಿಸಲು ರೂ.100 ಶುಲ್ಕ ಪಾವತಿಸಬೇಕು. ಮಹಿಳಾ / ಎಸ್‌ಸಿ / ಎಸ್‌ಟಿ / PWD / ಮಾಜಿ ಸೈನಿಕ
ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್‌ಲೈನ್‌ ಮೂಲಕ ಮತ್ತು ಆಫ್‌ಲೈನ್‌
ಚಲನ್‌ ಮೂಲಕ ಸಹ ಪಾವತಿ ಮಾಡಬಹುದು.

**ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ**
[https://ssc.nic.in/Registration/Home](https://ssc.nic.in/Registration/Home)**
ನೋಟಿಫಿಕೇಶನ್**[https://ssc.nic.in](https://ssc.nic.in)/

Advertisement
