# ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳಿಗೆ ಸಿಹಿ ಸುದ್ದಿ!! ಎಕ್ಸಾಮ್ ಮುಗಿಯುವ ವರೆಗೆ ನಿಮಗಾಗಿ ಸಂಚರಿಸಲಿದೆ ವಿಶೇಷ ಕರ್ನಾಟಕ ಸಾರಿಗೆ!!

- Link: https://hosakannada.com/news/sslc-exam-and-government-bus/
- Published: 2022-03-18T20:38:08+00:00
- Author: ಹೊಸಕನ್ನಡ ನ್ಯೂಸ್

ರಾಜ್ಯಾದ್ಯಂತ ಮಾರ್ಚ್ 28 ರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗುವ ಹಿನ್ನೆಲೆಯಲ್ಲಿ
ರಾಜ್ಯಾ ರಸ್ತೆ ಸಾರಿಗೆ ನಿಗಮವು ಸಿಹಿ ಸುದ್ದಿಯೊಂದನ್ನು ನೀಡಿದೆ.

Sponsored

ಶಾಲಾ ವಿದ್ಯಾರ್ಥಿಗಳ ಬಸ್ ಪಾಸ್ ನಲ್ಲಿ ಮಾರ್ಚ್ 31 ಕೊನೆಯ ದಿನವಾಗಿದ್ದು, ಆ ಬಳಿಕ ಟಿಕೆಟ್ ಪಡೆದು
ಹೋಗಬೇಕಾಗಿದೆ. ಆದರೆ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಳೆದ ಕೆಲ ವರ್ಷಗಳ ಹಾಗೆಯೇ ಈ ಬಾರಿಯೂ ಪರೀಕ್ಷೆ
ಮುಗಿಯುವ ವರೆಗೆ ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ ಬಸ್ಸುಗಳಲ್ಲಿ ಹಾಲ್ ಟಿಕೆಟ್ ತೋರಿಸಿ ಪ್ರಯಾಣಿಸಬಹುದಾಗಿದೆ
ಎಂದು ನಿಗಮವು ಆದೇಶ ಹೊರಡಿಸಿದೆ.

Advertisement

Advertisement

ಮಾರ್ಚ್ 28 ರಿಂದ ಏಪ್ರಿಲ್ 11 ರ ವರೆಗೆ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯಲಿದ್ದು, ವಿದ್ಯಾರ್ಥಿಗಳು
ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದೆ.

Advertisement
