# ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆ ವಿದ್ಯಾರ್ಥಿನಿ ವಿಕ್ರೀತ ರಾಷ್ಟ್ರಮಟ್ಟದ ಫ್ಲೋರ್‌ಬಾಲ್ ಚಾಂಪಿಯನ್ ಷಿಪ್‌ಗೆ ಆಯ್ಕೆ

- Link: https://hosakannada.com/news/sri-mahavira-college-moodbidri-student-vikreeta-selected-for-national-level-floorball-championship/
- Published: 2026-04-10T10:44:36+00:00
- Author: ಹೊಸಕನ್ನಡ ನ್ಯೂಸ್

ಮೂಡುಬಿದಿರೆ: ಮಹಾರಾಷ್ಟ್ರದ ಬಲ್ಹಾರಷ್‌ನಲ್ಲಿ ಏಪ್ರಿಲ್ 3ರಿಂದ ನಡೆಯುತ್ತಿರುವ 2025-26ನೇ ಸಾಲಿನ
ರಾಷ್ಟ್ರಮಟ್ಟದ 19ನೇ ಫ್ಲೋರ್‌ಬಾಲ್ ಚಾಂಪಿಯನ್‌ ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು
ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿನಿ ಕು. ವಿಕ್ರೀತ ಇವರುಆಯ್ಕೆಯಾಗಿರುತ್ತಾರೆ.
ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಕ್ಷಿತ್ ರೈ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿನಿಯ
ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾoಶುಪಾಲರು, ಅಧ್ಯಾಪಕ-ಅಧ್ಯಾಪಕೇತರ ವರ್ಗ ಹಾಗೂ ವಿದ್ಯಾರ್ಥಿಗಳು
ಅಭಿನಂದನೆ ಸಲ್ಲಿಸಿದ್ದಾರೆ.

Sponsored

Advertisement

Advertisement

Advertisement
