# ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಗ್ಯಾರೇಜ್ : 3 ಬೈಕ್,5 ಕಾರು ಬೆಂಕಿಗಾಹುತಿ

- Link: https://hosakannada.com/news/short-circuit-and-garage/
- Published: 2022-02-04T08:44:15+00:00
- Author: Praveen Chennavara

ಬೆಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಗ್ಯಾರೇಜ್ ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ವಿವೇಕನಗರದ
ವನ್ನರ್ ಪೇಟ್ ನೆಡೆದಿದೆ.

Sponsored

ನಿನ್ನೆ ತಡರಾತ್ರಿ 2 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಗ್ಯಾರೇಜ್‌ನಲ್ಲಿರುವ 3 ಬೈಕ್, 
5 ಕಾರು ಬೆಂಕಿಗಾಹುತಿಯಾಗಿದೆ. ನಾಸೀರ್ ಅವರ ಮಾಲೀಕತ್ವದ ಗ್ಯಾರೇಜ್ ಇದಾಗಿದೆ.

Advertisement

Advertisement

ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾರೇಜ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸು ವೇಳೆ ಗ್ಯಾರೇಜ್
ನಲ್ಲಿಟ್ಟಿದ್ದ 2 ಸಿಲಿಂಡರ್ ಸ್ಪೋಟವಾಗಿದೆ. ಸ್ಪೋಟದ ತೀವ್ರತೆಗೆ, ಬೆಂಕಿಯ ಕೆನ್ನಾಲಿಗೆಗೆ ಕಾರು 
ಗ್ಯಾರೇಜ್ ಸಂಪೂರ್ಣ ಭಸ್ಮವಾಗಿದೆ.

3 ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸತತ ಒಂದುವರೆ ಗಂಟೆಗಳ ಕಾರ್ಯಾಚರಣೆ
ಬಳಿಕ ಬೆಂಕಿ ನಂದಿಸಿದ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.

Advertisement
