# ‘ವೇದ’ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಅಪ್ಪು ನೆನೆದು ಗಳ ಗಳನೆ ಅತ್ತ ಶಿವಣ್ಣ! ತಬ್ಬಿಕೊಂಡು ಸಮಾಧಾನ ಮಾಡಿದ ಬಾಲಯ್ಯ

- Link: https://hosakannada.com/news/shivanna-at-veda-pre-release-event/
- Published: 2023-02-08T12:14:31+00:00
- Author: ಹೊಸಕನ್ನಡ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಕನ್ನಡದಲ್ಲಿ ಭರ್ಜರಿಯಾಗಿ ತೆರೆ ಕಂಡು,
ಸಕ್ಸಸ್ ಕೂಡ ಆಗಿ ಇದೀಗ ತೆಲುಗಿನಲ್ಲಿ ಅಬ್ಬರಿಸಲು ಮುಂದಡಿ ಇಡುತ್ತಿದೆ. ಪ್ರಚಾರದ ಕಾರ್ಯವೂ ಭರದಿಂದ
ಸಾಗುತ್ತಿದ್ದೆ. ಇದೀಗ ಹೈದರಾಬಾದ್​ನಲ್ಲಿ ನಡೆದ ‘ವೇದ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಪಾಲ್ಗೊಂಡಿದ್ದ
ಶಿವಣ್ಣ, ತಮ್ಮ ಪ್ರೀತಿಯ ತಮ್ಮ ‘ಅಪ್ಪು’ನ ನೆನೆದು ಭಾವುಕರಾದರಾಗಿದ್ದಾರೆ. ಪಕ್ಕದಲ್ಲಿದ್ದ ನಂದಮೂರಿ
ಬಾಲಕೃಷ್ಣ ಅವರು ಶಿವರಾಜ್​ಕುಮಾರ್ ಅವರನ್ನು ಸಮಾಧಾನ ಮಾಡಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ
ವೈರಲ್ ಆಗುತ್ತಿದೆ.

Sponsored

ಸ್ಯಾಂಡಲ್ ವುಡ್ ನ ದೊಡ್ಡ ಮನೆಯ ಬ್ರದರ್ಸ್ ಅಂದ್ರೆ ಎಲ್ಲರಿಗೂ ಒಂದು ಗೌರವ. ಅವರ ನಡುವಿನ ಭಾಂದವ್ಯಕ್ಕೆ
ಎಂತವರೂ ಮನಸೋಲುತ್ತಾರೆ. ಅದರಲ್ಲೂ ಶಿವರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರು ಅಣ್ಣ ತಮ್ಮ
ಅನ್ನುವುದಕ್ಕಿಂತ ಸ್ನೇಹಿತರಂತಿದ್ದವರು. ಅವರ ನಡುವೆ ಎಷ್ಟು ಆಪ್ತತೆ ಇತ್ತು ಅನ್ನೋದನ್ನು ಮತ್ತೆ 
ವಿವರಿಸಿ ಹೇಳಬೇಕಿಲ್ಲ. ಅಪ್ಪುನ ಕಳೆದುಕೊಂಡ ನಂತರದಲ್ಲಿ ಶಿವರಾಜ್​ಕುಮಾರ್ ತುಂಬಾನೇ ದುಃಖಿತರಾಗಿದ್ದಾರೆ.
ಪ್ರತಿ ವೇದಿಕೆ ಮೇಲೆ ಅಪ್ಪುನ ನೆನಪಿಸಿಕೊಂಡು ಶಿವಣ್ಣ ಭಾವುಕರಾಗುತ್ತಾರೆ. ಆ ನೋವಿನಿಂದ ಅವರಿನ್ನು
ಹೊರಬಂದಿಲ್ಲ. ಇದೀಗ ಹೈದರಾಬಾದಿನಲ್ಲೂ ತಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Advertisement

Advertisement

‘ವೆದ’ ತೆಲುಗು ವರ್ಷನ್​ನ ಪ್ರೀ ರಿಲೀಸ್ ಇವೆಂಟ್ ಫೆಬ್ರವರಿ 7ರಂದು ಹೈದರಾಬಾದ್​ನಲ್ಲಿ ನಡೆದಿದೆ.
ಈ ಕಾರ್ಯಕ್ರಮಕ್ಕೆ ಬಾಲಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಮಯದಲ್ಲಿ ವೇದಿಕೆ ಮೇಲೆ ಪುನೀತ್
ಅವರ ವಿಡಿಯೋ ಪ್ರಸಾರ ಮಾಡಲಾಯಿತು. ಇದನ್ನು ನೋಡುತ್ತಿದ್ದಂತೆ ಶಿವಣ್ಣ ಅವರಿಗೆ ದುಃಖ ತಡೆಯಲು ಆಗಲೇ
ಇಲ್ಲ. ಒಂದೇ ಸಮನೆ ಕಣ್ಣೀರು ಹಾಕಿದರು. ಪಕ್ಕದಲ್ಲೇ ಇದ್ದ ಬಾಲಯ್ಯ ಅವರು ಸಮಾಧಾನ ಮಾಡಲು ಪ್ರಯತ್ನಿಸಿದರು.

ಶಿವರಾಜ್​ಕುಮಾರ್ ಅವರ ‘ವೇದ’ ಹಲವು ಕಾರಣಗಳಿಂದ ವಿಶೇಷ ಎನಿಸಿಕೊಂಡಿದೆ. ಇದು ಶಿವರಾಜ್​ಕುಮಾರ್ ಅವರ
125ನೇ ಚಿತ್ರ. ಗೀತಾ ಶಿವರಾಜ್​ಕುಮಾರ್ ನಿರ್ಮಾಣದ ಮೊದಲ ಸಿನಿಮಾ. ಎ. ಹರ್ಷ ಹಾಗೂ ಶಿವರಾಜ್​ಕುಮಾರ್
ಅವರದ್ದು ಹಿಟ್ ಕಾಂಬಿನೇಷನ್. ‘ಭಜರಂಗಿ’ ಅಂತಹ ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿದೆ. ಹರ್ಷ ಹಾಗೂ
ಶಿವಣ್ಣ ಕಾಂಬಿನೇಷನ್​ನಲ್ಲಿ ಮೂಡಿಬಂದ 4ನೇ ಚಿತ್ರ ಇದಾಗಿದೆ. ಈ ಎಲ್ಲಾ ಕಾರಣದಿಂದಲೂ ಚಿತ್ರಕ್ಕೆ 
ಸಾಕಷ್ಟು ಹೈಪ್ ಸಿಕ್ಕಿತ್ತು. ಈಗ ಈ ಚಿತ್ರ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

‘ವೇದ’ ಸಿನಿಮಾ ಕಳೆದ ವರ್ಷಾಂತ್ಯದಲ್ಲಿ ತೆರೆಗೆ ಬಂದು ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು. ಇದೀಗ 
ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗುತ್ತಿದೆ. ವಿಶೇಷ ಎಂದರೆ ಈ ಚಿತ್ರ ತೆಲುಗಿನಲ್ಲೂ
ತೆರೆಗೆ ಬರುತ್ತಿದೆ. ಫೆಬ್ರವರಿ 9ಕ್ಕೆ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ತೆಲುಗಿನಲ್ಲಿ
ಅಬ್ಬರದ ಪ್ರಚಾರ ಕೂಡ ಸಿಗುತ್ತಿದೆ.

> That Brothers Bond ❤️🙏
> Balayya Babai : Naa Thammudu ShivarajKumar 👏✨Shivanna:
> Jai Balayya ✊🚩Appu Boss Always With Us Shivanna 😓😭[#ShivaRajKumar](https://x.com/hashtag/ShivaRajKumar?src=hash&ref_src=twsrc%5Etfw)
> [#NBK](https://x.com/hashtag/NBK?src=hash&ref_src=twsrc%5Etfw) [#NandamuriBalakrishna](https://x.com/hashtag/NandamuriBalakrishna?src=hash&ref_src=twsrc%5Etfw)
> [pic.twitter.com/afO0fv1pyi](https://t.co/afO0fv1pyi)
> — Niharika Chowdhary (@NiharikaC01) [February 8, 2023](https://x.com/NiharikaC01/status/1623128575259078662?ref_src=twsrc%5Etfw)

Advertisement
