# ವ್ಯಕ್ತಿಯ ಅಂತ್ಯ ಸಂಸ್ಕಾರದ ಬಳಿಕ ಚಿತೆ ಮೇಲೆ ಕುರಿ ತಲೆಬುರುಡೆ, ಮದ್ಯದ ಬಾಟಲಿಗಳು ಪತ್ತೆ!!

- Link: https://hosakannada.com/news/sheep-skull-liquor-bottles-found-on-funeral-pyre-after-mans-funeral/
- Published: 2026-09-05T17:47:12+00:00
- Author: ಹೊಸಕನ್ನಡ ನ್ಯೂಸ್

ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ಮರುದಿನ ಚಿತೆಯ ಮೇಲೆ ಮದ್ಯದ ಬಾಟಲಿಗಳು, ಸಿಹಿ ತಿಂಡಿ ಹಾಗೂ ಮೇಕೆಯ
ತಲೆಬುರುಡೆ ಪತ್ತೆಯಾಗಿದ್ದು, ಸ್ಥಳೀಯರನ್ನು ಭಯಭೀತರನ್ನಾಗಿ ಮಾಡಿದ ಘಟನೆ ಪಂಜಾಬಿನಲ್ಲಿ ನಡೆದಿದೆ.

Sponsored

ಲುಧಿಯಾನದ ಜಗ್ರಾಂ ವ್ಯಾಪ್ತಿಯ ‘ಲೀಲಾ ಮೇಘ್ ಸಿಂಗ್’ ಎಂಬ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಗ್ರಾಮದ ನಿವಾಸಿ 45 ವರ್ಷದ ಜಗದೀಪ್ ಸಿಂಗ್ ಎಂಬುವರು ಇತ್ತೀಚೆಗೆ ನಿಧನರಾಗಿದ್ದರು. ನಿಯಮದಂತೆ ಅವರ
ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಮರುದಿನ ಕುಟುಂಬಸ್ಥರು ಅಸ್ಥಿ ಸಂಗ್ರಹಿಸಲು ಸ್ಮಶಾನಕ್ಕೆ ತೆರಳಿದಾಗ
ಚಿತೆಯ ಮೇಲೆ ಬಲಿ ನೀಡಿದ ಮೇಕೆಯ ತಲೆಬುರುಡೆ, ಮದ್ಯದ ಬಾಟಲಿಗಳು, ಲಾಡು ಹಾಗೂ ಇತರ ಪೂಜಾ ಸಾಮಗ್ರಿಗಳು
ಪತ್ತೆಯಾಗಿವೆ. ಇದನ್ನು ಕಂಡು ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

Advertisement

Advertisement

ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ

ಈ ಕೃತ್ಯದ ಹಿಂದೆ ಮಾಟ-ಮಂತ್ರ ಅಥವಾ ತಾಂತ್ರಿಕ ಕ್ರಿಯೆಯ ಕೈವಾಡವಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಸ್ಮಶಾನದ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ
ಗ್ರಾಮಸ್ಥರು ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು
ಪರಿಶೀಲಿಸಿದ್ದಾರೆ.

ಈ ವೇಳೆ ಕಾರೊಂದರಲ್ಲಿ ವ್ಯಕ್ತಿಯೊಬ್ಬ ಸ್ಮಶಾನಕ್ಕೆ ಬಂದು ಹೋಗುತ್ತಿರುವುದು ಪತ್ತೆಯಾಗಿದೆ.  ಇದರಿಂದ
ಕುಪಿತರಾದ ಕೆಲವು ಗ್ರಾಮಸ್ಥರು ಕೈಯಲ್ಲಿ ಕೋಲುಗಳನ್ನು ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ
ಸಿಧ್ವಾನ್ ಬೇಟ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಮರ್‌ಜೀತ್ ಸಿಂಗ್ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ
ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶಂಕಿತ ವ್ಯಕ್ತಿಯನ್ನು
ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

Advertisement
