# ಜೋರಾಗಿ ಬೀಸಿದ ಬಿರುಗಾಳಿಗೆ ಕುಸಿದ ಶಾಮಿಯಾನ | ಡಾ.ವೀರೇಂದ್ರ ಹೆಗ್ಗಡೆ ಅವರ ಪುತ್ರಿ, ಶಾಸಕ ಅಪಾಯದಿಂದ ಪಾರು!

- Link: https://hosakannada.com/news/shamiyana-drop-down/
- Published: 2022-03-12T19:06:52+00:00
- Author: ಹೊಸಕನ್ನಡ ನ್ಯೂಸ್

ಶನಿವಾರ ನೂರಾರು ಜನರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಮಿಯಾನ ಕುಸಿದು ಬಿದ್ದ ಘಟನೆಯೊಂದು
ತುಮಕೂರು ಜಿಲ್ಲೆಯ 30 ನೇ ವಾರ್ಡ್ ಮ ಗಾರೆನರಸಯ್ಯ ಕಟ್ಟೆಯಲ್ಲಿ ನಡೆದಿದೆ.

Sponsored

ಕಾರ್ಪೋರೇಟರ್ ವಿಷ್ಣುವರ್ಧನ್ ಸೇರಿ‌ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ
ಪುತ್ರಿ ಶ್ರದ್ಧಾ , ಶಾಸಕ ಜೆ ಬಿ ಜ್ಯೋತಿ ಗಣೆಶ್, ಮೇಯರ್ ಬಿ.ಜಿ.ಕೃಷ್ಣಪ್ಪ ಸೇರಿದಂತೆ ಪ್ರಾಣಾಪಾಯದಿಂದ
ಪಾರಾಗಿದ್ದಾರೆ.

Advertisement

Advertisement

ಗಾರೆನರಸಯ್ಯ ಕಟ್ಟೆ ( ಕೆರೆ)ಯನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಅಭಿವೃದ್ಧಿ ಪಡಿಸಲಾಗಿತ್ತು.
ಈ ಕೆರೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಹಿನ್ನೆಲೆ ಇಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಎಲ್ಲಾ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆ ಮುಂಭಾಗ ನೂರಾರು ಜನ ಆಸೀನರಾಗಿದ್ದರು.
ಈ ವೇಳೆ ರಭಸವಾಗಿ ಬೀಸಿದ ಬಿರುಗಾಳಿಗೆ ಶಾಮಿಯಾನ ಕುಸಿದಿದೆ. ಭಯದಿಂದ ಜನ ದಿಕ್ಕುಪಾಲಾಗಿ ಓಡಿದ್ದಾರೆ.

Advertisement
