# ‘ಕರ್ಮ ಪೂಜಾ’ದ ಬಳಿಕ ನಡೆವ ವಿಸರ್ಜನಾ ಕಾರ್ಯಕ್ರಮದ ವೇಳೆ ಏಳು ಬಾಲಕಿಯರು ಹೊಂಡದಲ್ಲಿ ಮುಳುಗಿ ಸಾವು!!

- Link: https://hosakannada.com/news/seven-girls-death/
- Published: 2021-09-19T10:10:57+00:00
- Author: ನಿಶ್ಮಿತಾ ಎನ್.

ಜಾರ್ಖಂಡ್ :ಹಬ್ಬದ ಪೂಜೆಯಂದು ‘ಕರ್ಮ ಪೂಜಾ’ ವಿಧಿವಿಧಾನಗಳನ್ನು ನೆರವೇರಿಸಿದ ನಂತರ,ವಿಸರ್ಜನೆ ಕಾರ್ಯಕ್ರಮಕ್ಕಾಗಿ
ತೆರಳಿದ್ದ ವೇಳೆ ಏಳು ಬಾಲಕಿಯರು ಹೊಂಡದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ
ಲಾತೇಹಾರ್ ಜಿಲ್ಲೆಯಲ್ಲಿ
ಶನಿವಾರ ಸಂಭವಿಸಿದೆ.

Sponsored

ಜಿಲ್ಲೆಯ ಬಾಲೂಮಠ ಪೊಲೀಸ್ ಠಾಣೆ
ವ್ಯಾಪ್ತಿಯ ಬುಕ್ರು ಗ್ರಾಮದಲ್ಲಿ ಈ ಘಟನೆ ನಡೆದಿದೆಎಂದು ಜಿಲ್ಲಾಧಿಕಾರಿ
ಅಬು ಇಮ್ರಾನ್ ತಿಳಿಸಿದ್ದಾರೆ.

Advertisement

Advertisement

‘ಕರ್ಮ ಪೂಜಾ’ ಎಂಬುದು ಜಾರ್ಖಂಡ್‌ನಲ್ಲಿ
ಆಚರಿಸಲಾಗುವ ದೊಡ್ಡ ಹಬ್ಬಗಳಲ್ಲೊಂದಾಗಿದ್ದು, ಇದು ಪ್ರಕೃತಿಯನ್ನು
ಪೂಜಿಸುವ ಹಬ್ಬವಾಗಿದೆ.

ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ತೆರಳಿದ್ದು,
ಹಲವರನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿಹಲವರು ಗಾಯಗೊಂಡಿದ್ದು,
ಮೂವರನ್ನುಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement
