# ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ ;ವಿದ್ವತ್‌ ಪಿಯು ಕಾಲೇಜಿಗೆ ಮತ್ತೊಂದು ಗರಿ; ವಿಜ್ಞಾನ ವಿಭಾಗದಲ್ಲಿ ಅಗ್ರಪಂಕ್ತಿ ಸಾಧಿಸಿದ ಚಿನ್ಮಯ್ ಜಿ.ಕೆ. ಶೇ.99.16

- Link: https://hosakannada.com/news/second-puc-re-evaluation-another-feather-for-vidwat-pu-college-chinmay-g-k-topped/
- Published: 2026-04-30T10:38:32+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಪ್ರಥಮ ಪ್ರಯತ್ನದಲ್ಲೇ
ಅತ್ಯುತ್ತಮ ಫಲಿತಾಂಶ ದಾಖಲಿಸಿರುವ ನಡುವೆ ಮರು ಮೌಲ್ಯಮಾಪನದಲ್ಲಿ ಇದೀಗ ಚಿನ್ಮಯ್ ಜಿ.ಕೆ. (595) 
ಶೇ.99.16 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 5 ನೇ ಸ್ಥಾನಕ್ಕೆ ಜಿಗಿದು ಕಾಲೇಜಿನಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.

Sponsored

ವಿಜ್ಞಾನ ವಿಭಾಗದ ಪ್ರಥಮ ಫಲಿತಾಂಶದಲ್ಲಿ ತನುಶ್ರೀ (593) ಶೇ.98.83 ಅಂಕ ಗಳಿಸಿ ರಾಜ್ಯದಲ್ಲಿ 7 
ಸ್ಥಾನ ಪಡೆದಿದ್ದರು. ಈ ವೇಳೆ ಚಿನ್ಮಯ್ ಜಿ.ಕೆ. ಅವರು ಮರು ಮೌಲ್ಯಮಾಪನಕ್ಕೆ ಒಳಪಡಿಸಿದಂತೆ ಏಪ್ರಿಲ್
29 ರಂದು ಹೊರಬಂದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ (595) ಶೇ.99.16 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ
5 ನೇ ರ್ಯಾಂಕ್ (ಭೌತಶಾಸ್ತ್ರ-100, ರಸಾಯನಶಾಸ್ತ್ರ-100, ಗಣಿತ-100 ಮತ್ತು ಗಣಕ ವಿಜ್ಞಾನ-100) 
ಪಡೆದು ಕಾಲೇಜಿಗೆ ಕೀರ್ತಿ 3. (593) 8.98.83% (ರಸಾಯನಶಾಸ್ತ್ರ-100, ಭೌತಶಾಸ್ತ್ರ-100 ಗಣಿತಶಾಸ್ತ್ರ-
100, ಜೀವಶಾಸ್ತ್ರ-100) ನಾಲ್ಕು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ರಾಜ್ಯಕ್ಕೆ 7 ನೇ ರ್ಯಾಂಕ್
ಹಾಗೂ ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಧ್ಯಾನ ಈ ಹಿಂದೆ (590) ಅಂಕ(
ಕನ್ನಡ-100, ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100) ಪಡೆದಿದ್ದು ಮರು ಮೌಲ್ಯಮಾಪನ ನಡೆಸಿದಾಗ
ಭಾಷಾ ವಿಷಯದಲ್ಲಿ ಹೆಚ್ಚುವರಿ 1 ಅಂಕ ಪಡೆದು (591) ಶೇ.98.50 ಅಂಕ ಪಡೆದು ರಾಜ್ಯಕ್ಕೆ 9 ನೇ ರ್ಯಾಂಕ್,
ಕಾಲೇಜಿಗೆ ತೃತೀಯ ಸ್ಥಾನಿಯಾಗಿದ್ದಾರೆ.ಉಳಿದಂತೆ ವಿಜ್ಞಾನ ವಿಭಾಗದಲ್ಲಿ ಈ ಹಿಂದೆ ಜಿ.ಎಸ್.ರಾಹುಲ್(
584) -ಶೇ.97.33% ಪಡೆದಿದ್ದು ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 4 ಅಂಕಪಡೆದು (588)- ಶೇ.98, ಆಶ್ಲೇಷ್
ಜೆ.ಎಸ್. ಹೆಚ್ಚುವರಿ 6 ಅಂಕ ಪಡೆದು (573) ಶೇ.95., ಸಮ್ಯಕ್ ತೇಜಸ್ವಿ ಹೆಚ್ಚುವರಿ 4 ಅಂಕ ಪಡೆದು(
576) ಶೇ.96 ಹಾಗೂ ಮೈತಿಲಿ ಗೋರೆ, ಮೋಕ್ಷಾ, ನಿನಾದ ಎಸ್.ಎ., ಪ್ರಣವ್ ದೇವ್, ವೆನಿಕಾ ಬಿ.ವೈ., ವಿಕಾಸ್
ಜಿ.ಎನ್., ಯಶಸ್ವಿ ಆರ್. ಸಾಲ್ಯಾನ್, ಯಶಸ್ವಿನಿ ಜಯೇಂದ್ರ ಬಂಗೇರ ಹೆಚ್ಚುವರಿ ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ನೇಹಾ ಭಟ್ ಈ ಹಿಂದೆ 573 ಅಂಕ ಪಡೆದಿದ್ದು ಹೆಚ್ಚುವರಿ 11 ಅಂಕ ಪಡೆದು (584)
ಶೇ.97.33, ಒಟ್ಟು 17 ಮಂದಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕಾಗಿ ಪ್ರಯತ್ನಿಸಿದ್ದು ಈ ಪೈಕಿ 
ಬಹುತೇಕ ಮಂದಿ ಅತ್ಯುತ್ತಮ ಅಂಕದೊಂದಿಗೆ ಕಾಲೇಜಿಗೆ ಮತ್ತೊಂದುವ ಗರಿ ತಂದಿದ್ದಾರೆ. ಈ ಫಲಿತಾಂಶದಿಂದ
ಕಾಲೇಜಿನ ಶೈಕ್ಷಣಿಕ ಮಂಡಳಿಯನ್ನು ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ,
ಖಜಾಂಚಿ ಎಂ.ಕೆ.ಕಾಶಿನಾಥ್., ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಇ.ಮಂಡಳಲೆ ಪ್ರಶಂಸಿದ್ದಾರೆ.

Advertisement

Advertisement

Advertisement
