# ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು, ಉಜಿರೆ- ಐದು ದಿನಗಳ ರಾಷ್ಟ್ರೀಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ 

- Link: https://hosakannada.com/news/sdm-engineering-college-ujire-five-day-national-level-faculty-development-program/
- Published: 2026-08-17T18:33:50+00:00
- Author: ಹೊಸಕನ್ನಡ ನ್ಯೂಸ್

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು, ಉಜಿರೆಯಲ್ಲಿ “Next-Generation Academia: AI-Enabled Teaching,
Research and Innovation” ವಿಷಯದ ಕುರಿತು ಐದು ದಿನಗಳ ರಾಷ್ಟ್ರೀಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ
ಕಾರ್ಯಕ್ರಮ (FDP) ನಾಳೆ, 18 ಆಗಸ್ಟ್ 2026ರಿಂದ ಆರಂಭಗೊಳ್ಳಲಿದೆ.

Sponsored

ಕಾರ್ಯಕ್ರಮದ ಉದ್ಘಾಟಕರಾಗಿ ಹಾಗೂ ಮುಖ್ಯ ಭಾಷಣಕಾರರಾಗಿ ಡಾ. ಕೆ. ಸತ್ಯಮೂರ್ತಿ, ಪ್ರಾಧ್ಯಾಪಕರು ಹಾಗೂ
ನಿರ್ದೇಶಕರು (ಸಂಶೋಧನೆ), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ, ಧಾರವಾಡ, ಭಾಗವಹಿಸಲಿದ್ದಾರೆ.

Advertisement

Advertisement

ಮುಖ್ಯ ಅತಿಥಿಯಾಗಿ ಡಾ. ಸತೀಶ್ಚಂದ್ರ ಎಸ್., ಕಾರ್ಯದರ್ಶಿಗಳು, ಎಸ್‌ಡಿಎಂ ಶೈಕ್ಷಣಿಕ ಸಂಸ್ಥೆಗಳ ಸಂಘ,
ಉಜಿರೆ, ಉಪಸ್ಥಿತರಿರುವರು.

ಗೌರವ ಅತಿಥಿಯಾಗಿ ಶ್ರೀ ಪೂರನ್ ವರ್ಮಾ, ಸಿಇಒ–ಐಟಿ ಮತ್ತು ಹಾಸ್ಟೆಲ್ ಆಡಳಿತ, ಎಸ್‌ಡಿಎಂ ಶೈಕ್ಷಣಿಕ
ಸಂಸ್ಥೆಗಳ ಸಂಘ, ಉಜಿರೆ, ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ಮೂಲ ವಿಜ್ಞಾನ ಮತ್ತು ಗ್ರಂಥಾಲಯ
ವಿಭಾಗ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಜಂಟಿಯಾಗಿ ಆಯೋಜಿಸಿವೆ.

Advertisement
