# ಎಸ್ ಬಿಐ ಗ್ರಾಹಕರೇ ಹುಷಾರ್| ಈ ಎರಡು ನಂಬರಿಂದ ಕರೆ ಅಥವಾ ಸಂದೇಶ ಬಂದರೆ ಪ್ರತಿಕ್ರಿಯಿಸಬೇಡಿ!

- Link: https://hosakannada.com/news/sbi-bank-and-fraud-call/
- Published: 2022-04-23T19:41:10+00:00
- Author: ಹೊಸಕನ್ನಡ ನ್ಯೂಸ್

ನವದೆಹಲಿ: ಜಗತ್ತು ಟೆಕ್ನಾಲಾಜಿಯತ್ತ ದಾಪುಗಾಲು ಹಿಡುತ್ತಿದ್ದಂತೆಯೇ ಆನ್ಲೈನ್ ವಂಚನೆಗಳ ಪ್ರಕರಣಗಳು
ಅಧಿಕವಾಗುತ್ತಲೇ ಇದೆ. ಜನರಿಗೆ ಸುಲಭವಾಗಲಿ ಎಂದು ಹಲವಾರು ಆನ್ಲೈನ್ ಟೆಕ್ನಾಲಜಿ ಗಳನ್ನು ಜಾರಿಗೊಳಿಸಿದರೆ,
ಇದೀಗ ಈ ಆನ್ಲೈನ್ ವಹಿವಾಟುಗಳೇ ಜನರಿಗೆ ಸಂಕಟ ತಂದಿದೆ. ಇಂತಹ ಪ್ರಕರಣಗಳಿಂದ ಗ್ರಾಹಕರಿಗೆ ರಕ್ಷಣೆಯನ್ನು
ನೀಡಲು ಬ್ಯಾಂಕುಗಳು ಮುನ್ನೆಚ್ಚರಿಕಾ ಕ್ರಮಗಳನ್ನು ನೀಡುತ್ತಲೇ ಬಂದಿದೆ. ಇದೀಗ ಸ್ಟೇಟ್​ ಬ್ಯಾಂಕ್
ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮತ್ತೊಂದು ಎಚ್ಚರಿಕೆಯ ಕರೆಯನ್ನು ನೀಡಿದೆ.

Sponsored

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ,ಈ ಎರಡು ಮೊಬೈಲ್​ಫೋನ್​ ನಂಬರ್​ಗಳಿಂದ ಕರೆ ಬಂದರೆ ಹುಷಾರು ಎಂದು
ಮುನ್ನೆಚ್ಚರಿಕೆಯನ್ನು ನೀಡಿದೆ.ಎಸ್​​ಬಿಐ ಗ್ರಾಹಕರಿಗೆ +91-8294710946 ಮತ್ತು +91-7362951973
ನಂಬರ್​ಗಳಿಂದ ಬಹಳಷ್ಟು ಕರೆ ಹಾಗೂ ಸಂದೇಶಗಳು ಹೋಗುತ್ತಿದ್ದು, ಕೆವೈಸಿ ನೆಪದಲ್ಲಿ ಕೆಲವೊಂದು ಫಿಷಿಂಗ್
ಲಿಂಕ್​ ಕ್ಲಿಕ್ ಮಾಡುವಂತೆ ಕೇಳಿಕೊಳ್ಳಲಾಗುತ್ತಿದೆ.ಆದರೆ ಬ್ಯಾಂಕ್ ಆ ರೀತಿ ಯಾರಿಗೂ ಕರೆ ಮಾಡಿ ಕೆವೈಸಿ
ಇತ್ಯಾದಿ ಕೇಳವುದಿಲ್ಲ. ಮೇಲಿನ ಎರಡು ನಂಬರ್​ಗಳು ಬ್ಯಾಂಕ್​ಗೆ ಸಂಬಂಧಪಟ್ಟದಲ್ಲ ಎಂದು ಸ್ಪಷ್ಟನೆ 
ನೀಡಿದೆ.ಆ ನಂಬರ್​ಗಳ ಕರೆ ಮತ್ತು ಮೆಸೇಜ್​ಗಳಿಗೆ ಪ್ರತಿಕ್ರಿಯಿಸಬಾರದು ಎಂದು ಎಸ್​ಬಿಐ ತಿಳಿಸಿದೆ.

Advertisement

Advertisement

Advertisement
