# KSRTC: ಬಸ್ಸಿನಲ್ಲಿ ಮೈಸೂರಿಗೆ ಹೊರಟಿದ್ದ ನಾಲ್ಕು ಲವ್‌ಬರ್ಡ್ಸ್‌ಗೆ ರೂ.444 ಟಿಕೆಟ್

- Link: https://hosakannada.com/news/rs-444-ticket-for-four-lovebirds-who-were-going-to-mysore-by-ksrtc-bus/
- Published: 2024-03-27T15:22:02+00:00
- Author: ಹೊಸಕನ್ನಡ ನ್ಯೂಸ್

KSRTC: ಬೆಂಗಳೂರಿನಿಂದ ಮೈಸೂರಿಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಅಜ್ಜಿ-ಮೊಮ್ಮಗಳಿಗೆ ಕಂಡಕ್ಟರ್‌
ಏನೂ ಚಾರ್ಜ್‌ ಮಾಡಿಲ್ಲ. ಆದರೆ ಅವರ ಜೊತೆ ಇದ್ದ ನಾಲ್ಕು ಲವ್‌ಬರ್ಡ್ಸ್‌ಗೆ 444ರೂಪಾಯಿ ಟಿಕೆಟ್‌ 
ನೀಡಿದ್ದಾರೆ ಕಂಡಕ್ಟರ್.‌ ನಾಲ್ಕು ಮಕ್ಕಳು ಎಂದು ಟಿಕೆಟ್‌ನಲ್ಲಿ ನಮೂದು ಮಾಡಿದ್ದು, ಈ ಸುದ್ದಿ ಇದೀಗ
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Sponsored

![](https://hosakannada.com/wp-content/uploads/2024/03/birtd.jpg)

Advertisement

Advertisement

ಲೆಕ್ಕ ಮಾಡಿದರೆ ಒಂದು ಹಕ್ಕಿಗೆ 111 ರೂಪಾಯಿ ಟಿಕೆಟ್‌ ನೀಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನಿಂದ
ಮೈಸೂರಿಗೆ ಹೋಗಿರುವ ಅಜ್ಜಿ ಮೊಮ್ಮಗಳ ಜೊತೆ ತೆರಳಿದ ಈ ಲವ್‌ ಬರ್ಡ್ಸ್‌ಗೆ ಚಾರ್ಜ್‌ ಬಿದ್ದಿದೆ.

ಪ್ರಾಣಿಗಳಿಗೆ ಕೂಡಾ ಈಗ ಟಿಕೆಟ್‌ ನೀಡಲಾಗುತ್ತಿದೆ. ಈ ಕುರಿತು ಸಾರ್ವಜನಿಕರು ಅಪಸ್ವರ ಎತ್ತಿದ್ದರೂ
ಕೂಡಾ ಇದು ರೂಲ್ಸ್‌ ಎಂದು ಟಿಕೆಟ್‌ ನೀಡಲಾಗುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ
ಈ ಘಟನೆ ಕೂಡಾ ಅಂತಹುದೇ ಒಂದು ಘಟನೆ.

[ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊತ್ತಲ್ಲೇ ರಾಜ್ಯ ಬಿಜೆಪಿಗೆ ದೊಡ್ಡ ಆಘಾತ !!ಧಿಡೀರ್ ಎಂದು ಶಾಸಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಬಲ ನಾಯಕಿ !!](https://hosakannada.com/2024/03/27/tejaswini-gowda-has-resigned-as-a-member-of-the-legislative-council/)

Advertisement
