# ಚಿಕ್ಕಬಳ್ಳಾಪುರ ರಸ್ತೆ ಅಪಘಾತ | ಐಶರ್ ವಾಹನಕ್ಕೆ ಸಿಕ್ಕಿ ಚಿಂತಾಮಣಿ ಪ್ರಾಂಶುಪಾಲ ದುರಂತ ಸಾವು !

- Link: https://hosakannada.com/news/road-accident-chintamani/
- Published: 2022-08-22T07:01:44+00:00
- Author: ಕೆ. ಎಸ್. ರೂಪಾ

ಚಿಕ್ಕಬಳ್ಳಾಪುರ: ರಸ್ತೆ ಅಪಘಾತದಲ್ಲಿ ಚಿಂತಾಮಣಿ ನಗರದ ಲಕ್ಷ್ಮಿವಿದ್ಯಾ ಸಂಸ್ಥೆ ಪ್ರಾಂಶುಪಾಲ ಅಶೋಕ್
ರೆಡ್ಡಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿಯಲ್ಲಿ ವರದಿಯಾಗಿದೆ.

Sponsored

ಶನಿವಾರ ಮುಂಜಾನೆ ಬೆಳಿಗ್ಗೆ ಸುಮಾರು 8:35 ಸಮಯದಲ್ಲಿ ಪ್ರಾಂಶುಪಾಲರು ತಮ್ಮ ಮನೆಯಿಂದ ಕಾಲೇಜಿಗೆ 
ಹೋಗುವ ಸಂದರ್ಭ ಐಷೆರ್ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಗಾಯವಾಗಿ ರಕ್ತ ಸಾವ್ರವಾಗಿದೆ.
ಕೂಡಲೇ ಚಿಕಿತ್ಸೆಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

Advertisement

![](https://hosakannada.com/wp-content/uploads/2022/08/IMG-20220822-WA0004-1024x576.
jpg)

ಹೆಚ್ಚಿನ ಚಿಕೆತ್ಸೆಗೆ ಕೋಲಾರದ ಆರ್,ಎಲ್, ಜಾಲಪ್ಪ ಆಸ್ಪತ್ರೆಗೆ ದಾಖಲಿಸಲು ಸೂಚಿಸುತ್ತಾರೆ,ಆದರೆ 
ತಲೆಗೆ ತೀವ್ರ ರಕ್ತ ಸ್ರಾವ ಆದ್ದರಿಂದ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ .

ಮೃತ ವ್ಯಕ್ತಿ ಖಾಸಗಿ ಶಾಲೆಯ ಪ್ರಾಂಶುಪಾಲ ಎಂದು ತಿಳಿದು ಬಂದಿದೆ ಅಲ್ಲದೆ ರಸಾಯನ ಶಾಸ್ತ್ರದಲ್ಲಿ 
ಚಿನ್ನದ ಪದಕ ಪಡೆದ ಪ್ರತಿಭಾವಂತ ಎಂದು ಸಹ ತಿಳಿದಿದೆ.

![](https://hosakannada.com/wp-content/uploads/2022/08/IMG-20220822-WA0005-576x1024.
jpg)

ಕೆಲವು ದಿನಗಳ ಹಿಂದೆಯೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದೇಶದ ಕುರಿತು ಭಾಷಣ ಮಾಡಿದ್ದು
ಇದೀಗ ಅವರ ಅಕಾಲಿಕ ಮರಣ ಕಂಡು ಮುಗಿಲು ಮುಟ್ಟಿದೆ. ಈ ಕುರಿತು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ
ದೂರು ದಾಖಲಾಗಿದ್ದು ಐಷೆರ್ ಕ್ಯಾಂಟರ್ ವಾಹನ ಮತ್ತು ದ್ವಿಚಕ್ರ ವಾಹನ ಜಪ್ತಿ ಮಾಡಿ ತನಿಖೆ ನಡೆಸುತ್ತಿದ್ದರೆ.

Advertisement
