# H D Revanna: ರೇವಣ್ಣ ಅವರೇ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿಸಿದ್ದು – ಸ್ಪೋಟಕ ಸತ್ಯ ಬಿಚ್ಚಿಟ್ಟ A2 ಆರೋಪಿ !!

- Link: https://hosakannada.com/news/revanna-kidnapped-the-victim-a2-accused-revealed-shocking-truth/
- Published: 2024-05-05T12:53:50+00:00
- Author: ಹೊಸಕನ್ನಡ ನ್ಯೂಸ್

H D Revanna: ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್ ಕೇಸ್ ವಿಚಾರವಾಗಿ ನಿನ್ನೆ ಎಚ್ ಡಿ ರೇವಣ್ಣ(H D
Revanna) ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಒಂದೊಂದೇ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ.
ಇದೀಗ ಮತ್ತೊಂದು ಶಾಕಿಂಗ್ ವಿಚಾರ ಹೊರಬಿದ್ದಿದ್ದು ಲೈಂಗಿಕ ದೌರ್ಜನ್ಯ ಸಂತ್ರಸ್ತೆಯನ್ನು ಎಚ್ ಡಿ 
ರೇವಣ್ಣನವರೇ ಕಿಡ್ನಾಪ್ ಮಾಡಿಸಿದ್ದು ಎಂದು ಪ್ರಕರಣದಲ್ಲಿ A2 ಆರೋಪಿಯಾಗಿರುವ ಸತೀಶ್ ಬಾಬು(Sateesh
Babu) ಬಾಯಿ ಬಿಟ್ಟಿದ್ದಾನೆ.

Sponsored

ಹೌದು, ಅತ್ಯಾಚಾರಕ್ಕೆ ಒಳಗಾದ ಮಹಿಳೆ ದೂರು ನೀಡಬಾರದು ಎಂದು ಆಕೆಯನ್ನೆ ಅಪಹರಣ ಮಾಡಿದ ಗಂಭೀರ ಆರೋಪ
ಹೆಚ್ ಡಿ ರೇವಣ್ಣ ಅವರ ಮೇಲಿತ್ತು. ಆದರೀಗ ಇದನ್ನು ಮಾಡಿಸಿದ್ದೇ ರೇವಣ್ಣ ಎಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ
A2 ಆರೋಪಿ ಹೇಳಿಕೆ ನೀಡಿದ್ದು, ರೇವಣ್ಣಗೆ ಮತ್ತೊಂದು ಕಂಟಕ ಎದುರಾಗಿದೆ.

Advertisement

Advertisement

ಈ ಬಗ್ಗೆ ‘ ರೇವಣ್ಣ ಹೇಳಿದ್ದಕ್ಕೆ ಮಹಿಳೆ ಕರೆದೊಯ್ದು ಬಿಟ್ಟು ಬಂದಿದ್ದೆ’ ಎಂದು ಎಸ್‌ಐಟಿ ಮುಂದೆ
ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲದೆ ರೇವಣ್ಣ ಹೇಳಿದ ಜಾಗಕ್ಕೆ ಬಿಟ್ಟ ಬಂದ ನಂತರ
ಮಹಿಳೆಗೆ ಟಾರ್ಚರ್ ನೀಡಿರುವ ಅನುಮಾನ ವ್ಯಕ್ತವಾಗಿದೆ. ದೂರು ನೀಡದಂತೆ ಹೆಚ್.ಡಿ.ರೇವಣ್ಣ ಟಾರ್ಚರ್
ಮಾಡಿದ್ದಾರಾ ಎಂಬ ಪ್ರಶ್ನೆಗಳು ಎದ್ದಿದ್ದು, ಸಂತ್ರಸ್ತೆ ಹೇಳಿಕೆಯೂ ರೇವಣ್ಣಗೆ ಮುಳುವಾಗಲಿದೆ.

[ಇದನ್ನೂ ಓದಿ: ಮೊದಲ ಬಾರಿ ಗಡ್ಡ ಬಿಟ್ಟಿದ್ದೀರ?ಶೇವಿಂಗ್ vs ಟ್ರಿಮ್ಮಿಂಗ್ ನಿಮ್ಮ ಚರ್ಮಕ್ಕೆ ಯಾವುದು ಉತ್ತಮ? ](https://hosakannada.com/2024/05/05/trimming-vs-shaving-which-one-is-better-for-skin/)

Advertisement
