# ರೇಣುಕಾ ಸ್ವಾಮಿ ಕೊಲೆ ಕೇಸ್ – ACP ಚಂದನ್, PSI ವಿನಯ್ ವಿರುದ್ಧ ತನಿಖೆಗೆ ಆದೇಶ

- Link: https://hosakannada.com/news/renukaswamy-murder-case-probe-ordered-against-acp-chandan-and-psi-vinay/
- Published: 2026-10-12T09:02:35+00:00
- Author: ಹೊಸಕನ್ನಡ ನ್ಯೂಸ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿರುವ ಹಾಗೂ ಸಾಕ್ಷ್ಯನಾಶಕ್ಕೆ
ಸಹಕರಿಸಿರುವ ಆರೋಪದಡಿ, ಎಸಿಪಿ ಚಂದನ್ ಕುಮಾರ್ ಮತ್ತು ಸಬ್ ಇನ್‌ಸ್ಪೆಕ್ಟರ್ ವಿನಯ್  ವಿರುದ್ಧ ಇಲಾಖಾ
ಮಟ್ಟದ ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

Sponsored

ಕೊಲೆ ನಡೆದ ತಕ್ಷಣ ಆರೋಪಿಗಳು ಎಸ್‌ಐಗೆ ಕರೆ ಮಾಡಿ, ತಪ್ಪಿಸಿಕೊಳ್ಳುವುದು ಹೇಗೆ ಮತ್ತು ಮೃತದೇಹ ವಿಲೇವಾರಿ
ಕುರಿತು ಸಲಹೆ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.ಈ ಕುರಿತು ಮೈಸೂರು ಮೂಲದ ಸಾಮಾಜಿಕ ಹೋರಾಟಗಾರ
ಸ್ನೇಹಮಯಿ ಕೃಷ್ಣ ಅವರು ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಅವರನ್ನು ಭೇಟಿಯಾಗಿ ತನಿಖೆಯಲ್ಲಿ ಅಕ್ರಮ
ಹಾಗೂ ಸಾಕ್ಷ್ಯ ತಿರುಚುವಿಕೆ ನಡೆದಿರುವ ಬಗ್ಗೆ ಅಧಿಕೃತ ದೂರು ದಾಖಲಿಸಿದ್ದರು. ದೂರಿನ ಗಂಭೀರತೆಯನ್ನು
ಪರಿಗಣಿಸಿ ಅಧಿಕಾರಿಗಳ ವಿರುದ್ಧ ತನಿಖೆಗೆ ಶಿಫಾರಸು ಮಾಡಲಾಗಿದ್ದು, ಸದ್ಯ ಪಶ್ಚಿಮ ವಲಯದ ಜಂಟಿ ಪೊಲೀಸ್
ಆಯುಕ್ತ ವಂಶಿ ಕೃಷ್ಣ ಅವರಿಗೆ ಪ್ರಕರಣದ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

Advertisement

Advertisement

ಡಿಜಿಪಿ ಸೂಚನೆ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರು ತನಿಖಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು,
ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ಅವರಿಗೆ ಈ ವಿಚಾರಣೆಯ ಜವಾಬ್ದಾರಿ ವಹಿಸಿದ್ದಾರೆ.
ಎಸಿಪಿ ಮತ್ತು ಪಿಎಸ್‌ಐ ಮೇಲಿರುವ ಎಲ್ಲ ಆರೋಪಗಳ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ,
ಶೀಘ್ರವೇ ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

Advertisement
