# ಸೌತಡ್ಕ ದೇಗುಲದ ಮುಂಭಾಗದ ಅನಧಿಕೃತ ಅಂಗಡಿಗಳ ತೆರವು ವಿಚಾರ: ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಧಾರ್ಮಿಕ ದತ್ತಿ ಇಲಾಖೆ ಉಪಆಯುಕ್ತರ ಆದೇಶ

- Link: https://hosakannada.com/news/removal-of-unauthorized-shops-in-front-of-sautadka-temple/
- Published: 2026-06-26T15:39:20+00:00
- Author: ಹೊಸಕನ್ನಡ ನ್ಯೂಸ್

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ
ಕಾರ್ಯಾಚರಿಸುತ್ತಿರುವ ಅನಧಿಕೃತ ಅಂಗಡಿ ಮುಂಗಟ್ಟು ಗಳನ್ನು ತೆರವುಗೊಳಿಸುವ ವಿಚಾರದಲ್ಲಿ ನಿಯಮಾನುಸಾರ
ಕ್ರಮಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಉಪಆಯುಕ್ತರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ
ಸೂಚನೆ ನೀಡಿದ್ದಾರೆ.

Sponsored

ಕೊಕ್ಕಡ ನಿವಾಸಿಗಳಾದ ದಯನೀಶ್ ಹಾಗೂ ಪ್ರಶಾಂತ್ ಪೂವಾಜೆ ಎಂಬವರು ಸಲ್ಲಿಸಿರುವ ಎರಡು ಪ್ರತ್ಯೇಕ ದೂರು
ಅರ್ಜಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಿ ನಿಯಮಾನುಸಾರ ಸೂಕ್ತಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ
ಅರ್ಜಿದಾರರಿಗೆ ಹಿಂಬರಹ ನೀಡುವಂತೆ ಧಾರ್ಮಿಕದತ್ತಿ ಇಲಾಖೆಯ ಉಪ ಆಯುಕ್ತರು ದ.ಕ.ಜಿಲ್ಲಾಧಿಕಾರಿಯವರಿಗೆ
ಆದೇಶಿಸಿದ್ದಾರೆ.

Advertisement

Advertisement

ಕೊಕ್ಕಡ ನಿವಾಸಿ ದಯನೀಶ್ ಬಿನ್ ನಾರಾಯಣ ಗೌಡ ಎಂಬವರು ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯಕ್ಕೆ ಬರುವ
ಆದಾಯವನ್ನು ಆರ್‌ಎಸ್‌ಎಸ್ ಸಂಘಟನೆ ಟ್ರಸ್ ನವರು ಅಕ್ರಮವಾಗಿ ಪಡೆಯುತ್ತಿರುವುದಾಗಿ ಆರೋಪಿಸಿ ಹಾಗೂ
ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ಪರಿಶೀಲಿಸಿ ನಿಯಮಾನುಸಾರಸೂಕ್ತ
ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಅರ್ಜಿದಾರರಿಗೆ ಹಿಂಬರಹ ನೀಡುವಂತೆಧಾರ್ಮಿಕ ದತ್ತಿ ಇಲಾಖೆಯ
ಉಪ ಆಯುಕ್ತರು ದ.ಕ.ಜಿಲ್ಲಾಧಿಕಾರಿಯವರಿಗೆ ಜೂ.6ರಂದುಆದೇಶಿಸಿದ್ದಾರೆ.

ಕೊಕ್ಕಡ ನಿವಾಸಿ, ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಶಾಂತ್ ಪೂವಾಜೆ ಅವರು, ದೇವಸ್ಥಾನದ
ಸ್ಥಿರ ಆಸ್ತಿಯಲ್ಲಿ ಅನಧಿಕೃತವಾಗಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವುದರ ವಿರುದ್ಧ
ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಇಲಾಖೆಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಈ ಹಿಂದೆ ದೇವಸ್ಥಾನದ
ಆಡಳಿತ ಮಂಡಳಿಯು ನೋಟಿಸ್ ನೀಡಿ ಈ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದ್ದರೂ, ಮತ್ತೆ ಅದೇ ಜಾಗದಲ್ಲಿ
ಕಾನೂನು ಬಾಹಿರವಾಗಿ ವ್ಯಾಪಾರ ಪುನರಾರಂಭಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ವಿಷಯವನ್ನು
ತಕ್ಷಣವೇ ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಹಾಗೂ ಕೈಗೊಂಡ ಕ್ರಮದ ಕುರಿತು ಅರ್ಜಿದಾರರಿಗೆ
ಹಿಂಬರಹ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರು ದ.ಕ. ಜಿಲ್ಲಾಧಿಕಾರಿಯವರಿಗೆ ಜೂ.17ರಂದು
ಆದೇಶಿಸಿದ್ದಾರೆ. ಎರಡೂ ದೂರಿನ ಆದೇಶದ ಪ್ರತಿಯನ್ನು ಸೌತಡ್ಕ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ
ಕಳುಹಿಸಲಾಗಿದೆ.

 

Advertisement
