# Ration Card Holder: ರೇಷನ್ ಕಾರ್ಡ್’ದಾರರಿಗೆ ಮಹತ್ವದ ಸುದ್ದಿ- ಡಿಸೆಂಬರ್ ಒಳಗೆ ಈ ಕೆಲಸ ಮಾಡದಿದ್ರೆ ನಿಮ್ಮ ಕಾರ್ಡ್ ರದ್ದಾಗೋದು ಪಕ್ಕಾ !!

- Link: https://hosakannada.com/news/ration-card-update-ration-aadhar-link-if-this-work-is-not-done-before-december-ration-card-canceled/
- Published: 2023-10-16T14:19:42+00:00
- Author: ಹೊಸಕನ್ನಡ ನ್ಯೂಸ್

Ration – Aadhar Link: ಪಡಿತರ ಚೀಟಿದಾರರೇ(Ration Card Holder)ಗಮನಿಸಿ, ಡಿಸೆಂಬರ್ ತಿಂಗಳ 
ಒಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು(Ration Card Cancel)ಖಚಿತ. ರೇಷನ್
ಕಾರ್ಡ್ ಗೆ ಆಧಾರ್ ಲಿಂಕ್(Ration – Aadhar Link) ಮಾಡಿಸುವುದು ಕಡ್ಡಾಯವಾಗಿದ್ದು, ನೀವೇನಾದರೂ
ಈ ಕೆಲಸ ಮಾಡದಿದ್ದರೆ, ಡಿಸೆಂಬರ್ ಅಂತ್ಯದವರೆಗೂ ಅವಕಾಶವಿದ್ದರೂ ಕೂಡ ಈಗಲೇ ಮಾಡಿಬಿಡುವುದು ಉತ್ತಮ.

Sponsored

ಕೇಂದ್ರ ಸರ್ಕಾರ(Central Government)ಪಡಿತರ ಚೀಟಿದಾರರೆಲ್ಲರು ಕೂಡ ರೇಷನ್ ಕಾರ್ಡ್ ಗೆ ಆಧಾರ್ 
ಕಾರ್ಡ್ ಲಿಂಕ್ ಮಾಡಲೇಬೇಕು ಎಂದು ಸೂಚನೆ ನೀಡಿದ್ದು, ಈ ಮೊದಲು ನೀಡಿದ್ದ ಸಮಯಾವಕಾಶವನ್ನು ವಿಸ್ತರಣೆ
ಮಾಡಿ ಡಿಸೆಂಬರ್ 30ರವರೆಗೆ ರೇಷನ್ ಕಾರ್ಡನ್ನು ಆಧಾರ್ ಜೋಡಣೆ ಮಾಡಿಸಲು ಅನುವು ಮಾಡಿಕೊಡಲಾಗಿದೆ. 
ಒಂದು ವೇಳೆ, ಈ ದಿನಾಂಕದೊಳಗಾಗಿ ನೀವು ರೇಷನ್ – ಆಧಾರ್ (Ration – Aadhar Link)ಲಿಂಕ್ ಮಾಡದೇ 
ಹೋದರೆ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ದಟ್ಟವಾಗಿದ್ದು, ಇದರ ಜೊತೆಗೆ ಮುಂದಿನ ದಿನಗಳಲ್ಲಿ ದಂಡ
ತೆರಬೇಕಾಗಿ ಬರಬಹುದು.

Advertisement

Advertisement

ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ವಿಧಾನ ಹೀಗಿದೆ ನೋಡಿ!!
 * ನಿಮ್ಮ ರಾಜ್ಯದ ಸಾರ್ವಜನಿಕ 
ವಿತರಣಾ ವ್ಯವಸ್ಥೆ (PDS)ಪೋರ್ಟಲ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. * ನಿಮ್ಮ ಆಧಾರ್ ಕಾರ್ಡ್ 
ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿಕೊಂಡು‘
ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಿ. * ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ. * ನಂತರ
ಒಟಿಪಿ ನಮೂದಿಸಿಕೊಂಡು ಪಡಿತರ ಚೀಟಿ -ಆಧಾರ್ ಕಾರ್ಡ್ ಲಿಂಕ್ ಕ್ಲಿಕ್ ಮಾಡಿದರೆ, ರೇಷನ್ ಕಾರ್ಡ್ ಗೆ
ಆಧಾರ್ ಲಿಂಕ್ ಆಗಲಿದೆ.

ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಕುಟುಂಬದ ಸದಸ್ಯರ ವಿವರ ನಿಖರವಾಗಿ ಸರ್ಕಾರಕ್ಕೆ
ದೊರೆಯಲಿದ್ದು, ಈ ಮೂಲಕ ನಕಲಿ ಫಲಾನುಭವಿಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: [Mangaluru: ಹಿಂದೂ ವ್ಯಾಪಾರಿಗಳ ಸಂಘಕ್ಕೆ ಬಿಗ್ ಶಾಕ್- ಭಾರೀ ವಿರೋಧದ ನಡುವೆಯೂ ಟೆಂಡರ್’ನಲ್ಲಿ ಮುಸ್ಲಿಮರ ಪಾಲಾದ್ವು 6 ಅಂಗಡಿಗಳು](https://hosakannada.com/2023/10/16/dakshina-kannada-news-mangalore-mangaldevi-temple-auction-process-and-the-dispute-over-the-muslim-traders-latest-updates/)

Advertisement
