# ರಕ್ಷಾಬಂಧನಕ್ಕೆ ಮಹಿಳೆಯರಿಗೆ ಬಂಪರ್ ಕೊಡುಗೆ | ರಾಜ್ಯ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ!!!

- Link: https://hosakannada.com/news/raksha-bandhan-offer/
- Published: 2021-08-20T09:22:51+00:00
- Author: ಹೊಸಕನ್ನಡ

ರಕ್ಷಾ ಬಂಧನದ ದಿನದಂದು ಉತ್ತರಪ್ರದೇಶದ ಮಹಿಳೆಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂಪರ್ ಆಫರ್
ಒಂದನ್ನು ನೀಡಿದ್ದಾರೆ.

Sponsored

ಹೌದು, ಕಳೆದ ವರ್ಷದಂದತೆಯೇ ಈ ವರ್ಷವೂ ಮಹಿಳೆಯರಿಗೆ ಮುಖ್ಯಮಂತ್ರಿ ಭರ್ಜರಿ ಕೊಡುಗೆ ನೀಡುವ ಮೂಲಕ 
ಸುದ್ದಿಯಾಗಿದ್ದಾರೆ.

Advertisement

Advertisement

ಆಗಸ್ಟ್ 22ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಈ ದಿನ ರಾಜ್ಯ ಸಾರಿಗೆ ಸಂಸ್ಥೆಯ ಯಾವುದೇ
ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿಯೇ ಪ್ರಯಾಣ ಮಾಡುವ ಆಫರ್ ನೀಡಲಾಗಿದೆ.

ಈ ವಿಶೇಷ ಆಫರ್ ಆಗಸ್ಟ್ 21ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದ್ದು, 22 ರ ಮಧ್ಯರಾತ್ರಿಯವರೆಗೆ 
ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಉಚಿತ ಪ್ರಯಾಣದ ವೇಳೆ ಬಸ್ಸಿನಲ್ಲಿ ಪ್ರಯಾಣಿಸುವ
ಮಹಿಳೆಯರಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗುತ್ತದೆ.

ಕೊರೋನಾದಿಂದಾಗಿ ಸಭೆ ಸಮಾರಂಭಗಳಿಗೆ ಈಗಾಗಲೇ ನಿರ್ಬಂಧಗಳನ್ನು ಹಾಕಲಾಗಿದೆ. ಸದ್ಯ ಕೊರೊನಾ 3ನೇ ಅಲೆ
ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸಂಭ್ರಮಾಚಾರಣೆ ಮಾಡುವ ಬದಲು ಮನೆಯಲ್ಲಿಯೇ ರಕ್ಷಾಬಂಧನ
ಆಚರಿಸುವಂತೆ ಕರೆ ನೀಡಲಾಗಿದೆ.

Advertisement
